ಜಿಲ್ಲೆ

ವಿವಿಧ ಸಾಧಕರಿಗೆ ಸನ್ಮಾನ

Avinash R

ಬೆಳ್ತಂಗಡಿ: ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿಮುಗೇರಡ್ಕ ಇದರ 25ನೇ ವರ್ಷದ ರಜತ ಪಥ 2025 ಕಾರ್ಯಕ್ರಮದ ಪ್ರಯುಕ್ತ ಅಲೆಕ್ಕಿ ಶ್ರೀರಾಮ ಶಿಶುಮಂದಿರ ಮೈದಾನದಲ್ಲಿ ಕಟೀಲು ಮೇಳದಿಂದ ಯಕ್ಷಗಾನ ನಡೆಯಿತು.

ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಬಾಲಕೃಷ್ಣ ಗೌಡ ಬಂದಾರು, ಹೊನ್ನಪ್ಪ ಕುಲಾಲ್ ಬಂದಾರು, ದುಗ್ಗಪ್ಪ ಯಾನೆ ರಾಜರಾಮ್ ಕುಲಾಲ್ ಬಂದಾರು, ರಾಷ್ಟಮಟ್ಟದ ಪ್ರತಿಭಾನ್ವಿತ ಕ್ರೀಡಾಪಟು ಅಭಿಶ್ರುತ್ ಮುರ ಅವರನ್ನು ಗೌರವಿಸಲಾಯಿತು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಯುವ ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಯಕ್ಷಗಾನ ಸೇವಾಕರ್ತರಾದ ಉಮ್ಮಕ್ಕ, ಲೀಲಾವತಿ ಮತ್ತು ಪುರುಷೋತ್ತಮ ಗೌಡ, ಮೀಲನ್, ಯತಿದೇವಿ ಪುಣ್ಕೆತಡಿ ಮನೆ, ಆಡಳಿತ ಮಂಡಳಿ ಗೌರವಾಧ್ಯಕ್ಷ ಉದಯ ಭಟ್ ಕೊಳಬ್ಬೆ, ಅಧ್ಯಕ್ಷ ರಮೇಶ್ ಗೌಡ ನೆಕ್ಕರಾಜೆ, ಕಾರ್ಯದರ್ಶಿ ನೇಮಿಚಂದ್ರ, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಭರತೇಶ್ ಗೌಡ ಪುಣ್ಕೆದಡಿ, ಕಾರ್ಯದರ್ಶಿ ದೀಕ್ಷಿತ್ ಗೌಡ ಎರ್ಮಳ, ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಆಡಳಿತ ಮಂಡಳಿ, ಬೆಳ್ಳಿ ಹಬ್ಬ ಸಮಿತಿ, ಮಹಿಳಾ ಸಂಘ, ಮಾತೃ ಮಂಡಳಿ, ಮಾತಾಜಿಯವರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.