ಜಿಲ್ಲೆ

28 ಯುವ ಸೇವಾ ಸಂಸ್ಥೆಗಳಿಂದ ನಾಯಕತ್ವ ಶಿಕ್ಷಣ: ಭಾಸ್ಕರ ಶೆಟ್ಟಿಗಾರ್ ಹೇಳಿಕೆ

ಸೌಮ್ಯ ಆರ್

ಮೂಲ್ಕಿ: ಯುವ ಸೇವಾ ಸಂಸ್ಥೆಗಳಿಂದ ನಾಯಕತ್ವ ಶಿಕ್ಷಣ ಸಹಿತ ಅನೇಕ ಸಾಮಾಜಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನಿರಂತರವಾಗಿ ನಡೆಯುತ್ತಿದೆ ಎಂದು ಮೂಲ್ಕಿ ಜೆಸಿಐ ಸೇವಾ ಸಂಸ್ಥೆ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್ ಹೇಳಿದರು.

ಜೆಸಿಐ ಸೇವಾ ಸಂಸ್ಥೆ ವತಿಯಿಂದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಜೆಸಿಐ ಮಾಜಿ ಅಧ್ಯಕ್ಷರಾದ ಪ್ರಕಾಶ್ ಸುವರ್ಣ, ಅನಿಲ್ ಕೊಲಕಾಡಿ, ಸತೀಶ್ ಕಿಲ್ಪಾಡಿ, ಪದಾಧಿಕಾರಿಗಳಾದ ಕೇಶವ ಸುವರ್ಣ, ಸುರೇಶ್ ರಾವ್, ಅಶೋಕ್ ಕುಮಾರ್ ಶೆಟ್ಟಿ, ಮೊಹಮ್ಮದ್ ಹಬೀಬುಲ್ಲ, ದಿನೇಶ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಕಾರ್ಯಕ್ರಮ ನಿರೂಪಿಸಿದರು.