ಜಿಲ್ಲೆ

26ರಂದು ಸಾತ್ವಿಕ್ ಭಟ್‌ಗೆ ಸನ್ಮಾನ

ಸೌಮ್ಯ ಆರ್

ಬೆಳ್ತಂಗಡಿ: ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಇ) ಮತ್ತು ಭಾರತದ ರಕ್ಷಣಾ ಸಚಿವಾಲಯ ಸಹಯೋಗದೊಂದಿಗೆ ಶಿಕ್ಷಣ ಸಚಿವಾಲಯ ಶೌರ್ಯ ಪ್ರಶಸ್ತಿಗಳ ಉಪಕ್ರಮದ ಭಾಗವಾಗಿ ವೀರ್ ಗಾಥಾಸ್ಪರ್ಧೆಯನ್ನು 3ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದು ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್ ಭಟ್ ಚಿತ್ರಕಲಾ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾನೆ. ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ರಕ್ಷಣಾ ಸಚಿವರಿಂದ ಸಾತ್ವಿಕ್ ಭಟ್ ಸನ್ಮಾನ ಸ್ವೀಕರಿಸಲಿದ್ದಾರೆ.

ಶೌರ್ಯ ಪ್ರಶಸ್ತಿಗಳನ್ನು ಪಡೆದವರ ಶೌರ್ಯ ಮತ್ತು ಶೌರ್ಯದ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಈ ಸ್ಪರ್ಧೆಯನ್ನು ಪರಿಚಯಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಧೈರ್ಯ ಮತ್ತು ಪರಿಶ್ರಮದ ಮೌಲ್ಯಗಳನ್ನು ತುಂಬುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಸಾತ್ವಿಕ್ ಭಟ್‌ಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಪ್ರಾಂಶುಪಾಲ ಮನಮೋಹನ್ ನಾಯ್ಕ ಕೆ.ಜಿ.ಹಾಗೂ ಶಾಲಾ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.