ಜಿಲ್ಲೆ

ಡಾ. ಪಾಂಡುರಂಗಶೆಟ್ಟಿ ಅವರಿಗೆ ಬೆಂಗಳೂರು ರೋಟರಿ ಕ್ಲಬ್​ನಿಂದ ಶ್ರದ್ಧಾಂಜಲಿ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್​ (ಆರ್​.ವಿ. ಶಿಕ್ಷಣ ಸಂಸ್ಥೆಗಳು) ಅಧ್ಯಕ್ಷ ಹಾಗೂ ಆರ್​.ವಿ. ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿದ್ದ ಡಾ.ಎಂ.ಕೆ​. ಪಾಂಡುರಂಗಶೆಟ್ಟಿ ಅವರಿಗೆ ಬೆಂಗಳೂರು ರೋಟರಿ ಕ್ಲಬ್​ನಿಂದ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಡಾ.ಎಂ.ಕೆ.ಪಾಂಡುರಂಗಶೆಟ್ಟಿ ಅವರು ವಯೋಸಹಜ ಕಾರಣದಿಂದ ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಭಾನುವಾರ ಬೆಳಗ್ಗೆ 10ರ ವರೆಗೆ ಜಯನಗರದ ಅಶೋಕಪಿಲ್ಲರ್​ ರಸ್ತೆಯಲ್ಲಿರುವ ಆರ್​.ವಿ. ಟೀಚರ್​ ಕಾಲೇಜು ಸಭಾಂಗಣದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ಬಳಿಕ ಬನಶಂಕರಿ ಹಿಂದು ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಡಾ.ಎಂ.ಕೆ. ಪಾಂಡುರಂಗ ಶೆಟ್ಟಿ ಅವರು ಪಾಸ್ಟ್ ರೋಟರಿ ಇಂಟರ್​ನ್ಯಾಷನಲ್ ಡೈರೆಕ್ಟರ್ ಕೂಡ ಆಗಿದ್ದರಿಂದ ರೋಟರಿ ಕ್ಲಬ್​ ಆಫ್ ಬೆಂಗಳೂರು ಸಂಸ್ಥೆಯ ಪದಾಧಿಕಾರಿಗಳು ಇಂದು ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.