ಜಿಲ್ಲೆ

ಸಹಕಾರ, ಜನಪದ ಕ್ಷೇತ್ರದಲ್ಲಿ ಉತ್ತಮ ಸಾಧನೆ: ಶ್ರೀ ಚಂದ್ರಶೇಖರ ಸ್ವಾಮೀಜಿ ಶ್ಲಾಘನೆ

ಸೌಮ್ಯ ಆರ್

ಮೂಲ್ಕಿ: ಬೆಳಪು ಎಂಬ ಗ್ರಾಮೀಣ ಭಾಗದ ಪ್ರತಿಭೆಯಾಗಿ ಉತ್ತಮ ನಾಯಕತ್ವಗುಣ, ವಿಶೇಷತೆಯನ್ನು ಮೈಗೂಡಿಸಿಕೊಂಡ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಅವರು ಸಹಕಾರ ಮತ್ತು ತುಳುನಾಡ ಜನಪದ ಕ್ಷೇತ್ರದಲ್ಲಿ ಉತ್ತಮ ಸಂಘಟನಾತ್ಮಕ ರೀತಿಯಲ್ಲಿ ಬೆಳೆಯುತ್ತಿರುವುದು ಅಭಿನಂದನೀಯ ಎಂದು ಆಧ್ಯಾತ್ಮಿಕ ವಿಶ್ವ ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಮೂಲ್ಕಿ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಕರ್ನಾಟಕ ರಾಜ್ಯ ಹಾಲು ಮಹಾಮಂಡಲ ನಿಯಮಿತ ಬೆಂಗಳೂರು (ಕೆ.ಎಂ.ಎಫ್) ಹಾಗೂ ದ.ಕ. ಹಾಲು ಒಕ್ಕೂಟ ನಿರ್ದೇಶಕರಾಗಿ ಆಯ್ಕೆಯಾದ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಅವರನ್ನು ಸನ್ಮಾನಿಸಿ ಮಾತನಾಡಿದರು.

ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಸಮಾಜದ ದೀನ ವರ್ಗದ ಮೇಲೆ ಸ್ಪಂದನೆ ಹಾಗೂ ಅಭಿವೃದ್ಧಿಯ ಮೂಲ ಉದ್ದೇಶದಿಂದ ನಡೆಸಿದ ಪ್ರಾಮಾಣಿಕ ಪ್ರಯತ್ನದ ಫಲವಾಗಿದೆ. ಇದರಲ್ಲಿ ಸ್ವಾಮೀಜಿ ಮಾರ್ಗದರ್ಶನ ಬಹಳ ಮುಖ್ಯ ಎಂದರು.

ಆಶ್ರಮದ ನಿರ್ದೇಶಕರಾದ ರಜನಿ ಸಿ.ಭಟ್, ರಾಹುಲ್ ಸಿ.ಭಟ್, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ , ಭದ್ರತಾ ಅಧಿಕಾರಿಗಳಾದ ಪ್ರೇಮ್ ಕುಮಾರ್, ಶಿವರಾಜ್ ಕೆ., ಮೋಹನ್ ಕುಮಾರ್, ದೇವರಾಜ್ ಯಡಗೆ ಉಪಸ್ಥಿತರಿದ್ದರು. ಪುನೀತ್ ಕೃಷ್ಣ ನಿರೂಪಿಸಿದರು.