ಬೈಂದೂರು: ದೇವರ ನಂತರ ಜನರು ವೈದ್ಯರನ್ನು ತಮ್ಮ ಕಾಯಿಲೆ ಗುಣಪಡಿಸುವ ದೇವರಂತೆಯೇ ನೋಡುತ್ತಾರೆ ಎಂದು ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್ ಹೇಳಿದರು.
ವೈದ್ಯರ ದಿನಾಚರಣೆ ಅಂಗವಾಗಿ ಬೈಂದೂರು ರೋಟರಿ ವತಿಯಿಂದ ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರಾಜೇಶ್, ಡಾ.ನಂದಿನಿ, ಡಾ.ನಿವೇದಿತಾ, ಡಾ.ಜೈಮಿನಿ, ಡಾ.ವತ್ಸಲಾ, ಡಾ.ಆರ್.ಸಿ.ಪಾಟೀಲ್, ಹಿರಿಯ ವೈದ್ಯರಾದ ಡಾ.ಎಂ.ಎಸ್.ಶೆಟ್ಟಿ, ಡಾ.ಕೆ.ಆರ್.ನಂಬಿಯಾರ್, ಡಾ.ಸುಧಾಕರ ಹೆಗ್ಡೆ, ಡಾ.ಪ್ರವೀಣ್ ಶೆಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಹಿರಿಯ ರೊಟೇರಿಯನ್ ಐ.ನಾರಾಯಣ, ರೋಟರಿ ಕಾರ್ಯದರ್ಶಿ ಸುನೀಲ್ ಎಚ್.ಜಿ. ಉಪಸ್ಥಿತರಿದ್ದರು.