ಬೆಳ್ತಂಗಡಿ: ಬಳಂಜ ಶ್ರೀ ಕೊಡಮಣಿತ್ತಾಯ ದೈವದ ಕ್ಷೇತ್ರದಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿದ್ದ ಬಳಂಜ ಪರಾರಿ ಶಿವಯ್ಯ ಭಂಡಾರಿ ಅವರನ್ನು ಕೊಡಮಣಿತ್ತಾಯ ದೊಂಪದಬಲಿ ಸಂದರ್ಭ ಶ್ರೀ ಕೊಡಮಣಿತ್ತಾಯ ಆವರಣ ಅಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶೀತಲ್ ಪಡಿವಾಳ್, ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಪತ್ರಕರ್ತ ಮನೋಹರ್ ಬಳಂಜ, ಉಪಾಧ್ಯಕ್ಷ, ಚಲನ ಚಿತ್ರ ನಿರ್ದೇಶಕ ವಿನು ಬಳಂಜ, ಟ್ರಸ್ಟ್ ಕಾರ್ಯದರ್ಶಿ ರತ್ನರಾಜ್ ಪೇರಂದ ಬೈಲ್, ಅವರಣ ಸಮಿತಿ ಅಧ್ಯಕ್ಷ ಗಣೇಶ್ ಬಿ.ಕೆ., ಬಳಂಜ ದೇವಸ್ಥಾನ ಅರ್ಚಕ ಸುರೇಶ್ ಭಟ್, ಉದ್ಯಮಿ ಚಿತ್ತರಂಜನ್ ಹೆಗ್ಡೆ, ಶೇಷಗಿರಿ ಭಟ್ ಮುಂತಾದವರು ಉಪಸ್ಥಿತರಿದ್ದರು.