ಜಿಲ್ಲೆ

ಯಶವಂತ ಪೈ ಬದುಕು ಪ್ರೇರಣೆ : ಹರೀಶ್ ಉಪಾಧ್ಯಾಯ ಬಣ್ಣನೆ

ಸೌಮ್ಯ ಆರ್

ಉಪ್ಪಿನಂಗಡಿ : ಜೀವಿತಾವಧಿಯಲ್ಲಿ ಸಮಾಜದ ಹಿತಕ್ಕೆ ಶ್ರಮಿಸಿದ ಕಾರಣಕ್ಕೆ ಮರಣಾನಂತರ ವ್ಯಕ್ತಿ ಮತ್ತ್ತು ಅವರ ಕೊಡುಗೆಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಸಮಾಜದ ಹಿತಚಿಂತಕರಾಗಿ ಜೀವನ ನಡೆಸಿದ ಎನ್.ಯಶವಂತ ಪೈ ಅವರ ಬದುಕು ಸಮಾಜಕ್ಕೆ ಪ್ರೇರಣೆಯಾಗಿದೆ. ಶ್ರೀ ಗುರು ರಾಘವೇಂದ್ರ ಮಠದ ಟ್ರಸ್ಟಿಯಾಗಿ, ಹಲವಾರು ಸಂಘ ಸಂಸ್ಥೆಗಳ ನೇತೃತ್ವ ವಹಿಸಿ ಸಮಾಜಕ್ಕೆ ಸಂಪತ್ತಾಗಿ ಬದುಕು ನಡೆಸಿದ ಯಶವಂತ ಪೈಗಳು ಮುಂದಿನ ಪೀಳಿಗೆಗೆ ಮಾದರಿ ಎಂದು ಹರೀಶ್ ಉಪಾಧ್ಯಾಯ ಹೇಳಿದರು.

34ನೇ ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಆಯೋಜಿಸಲ್ಪಟ್ಟ ಯಶವಂತ ಪೈ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.ಮಠದ ಅಧ್ಯಕ್ಷ ಕೆ.ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಗೋಪಾಲ ಹೆಗ್ಡೆ , ಉದಯ ಕುಮಾರ್ ನುಡಿನಮನ ಸಲ್ಲಿಸಿದರು.

ಸ್ವರ್ಣೇಶ್ ಗಾಣಿಗ, ಮಲ್ಲೇಶ್ ಶೆಟ್ಟಿಗಾರ್, ವಿನಯ್ ಕುಲಾಲ್, ಬಿಪಿನ್, ಶ್ರೀನಿಧಿ ಉಪಾಧ್ಯಾಯ, ಶಾಂತಾರಾಮ ಭಟ್ ಕಾಂಚನ, ಶಿವಪ್ರಸಾದ್ ಮುದ್ರಾಜೆ, ಸದಾನಂದ ಪೂಜಾರಿ, ದಮಯಂತಿ ಶೆಟ್ಟಿ, ಪ್ರಶಾಂತ್ ಪೈ, ಸಂಪತ್ ಪೈ, ಸತ್ಯನಾರಾಯಣ ಬಳ್ಳಕ್ಕುರಾಯ, ಉಮೇಶ್ ಸುವರ್ಣ, ವೈಶಾಲಿ, ಎನ್.ಹರೀಶ್ ನಾಯಕ್ ಮೊದಲಾದವರು ಭಾಗವಹಿಸಿದ್ದರು.