ತಾವರಗೇರಾದ ಶ್ರೀ ತ್ರಿ ವೀರಭದ್ರೇಶ್ವರ ಜಾತ್ರೋತ್ಸವದ ನಿಮಿತ್ತ 1.5.ಟನ್ ತೂಕದ ಕಲ್ಲನ್ನು ಎಳೆಯುತ್ತಿರುವ ಎತ್ತುಗಳು. 
ಜಿಲ್ಲೆ

ತ್ರಿ ವೀರಭದ್ರೇಶ್ವರ ಜಾತ್ರೆ ಅದ್ಧೂರಿ

ಗಾಯತ್ರಿ ಮಾಲಿಪಾಟೀಲ್

ತಾವರಗೇರಾ: ಪಟ್ಟಣದ ಶ್ರೀ ತ್ರಿ ವೀರಭದ್ರೇಶ್ವರ ಜಾತ್ರೋತ್ಸವದ ನಿಮಿತ್ತ ಬುಧವಾರ ಎತ್ತುಗಳ ಶಕ್ತಿ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗುಡದೂರ ಸುಕ್ಷೇತ್ರದ ಶ್ರೀ ಗುರಯ್ಯ ತಾತ ಅವರು, ಕಲ್ಲು ಎಳೆಯುವ ಸ್ಪರ್ಧೆಗೆ ಎತ್ತುಗಳಿಗೆ ಪೂಜೆಸಲ್ಲಿಸಿ ಚಾಲನೆ ನೀಡಿದರು.

1.5 ಟನ್ ತೂಕದ ಕಲ್ಲನ್ನು ಕಡಿಮೆ ಅವಧಿಯಲ್ಲಿ ಎಳೆದ ಎತ್ತುಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಒಟ್ಟು 11 ಜೋಡಿ ಎತ್ತುಗಳು ಭಾಗವಹಿಸಿದ್ದವು. ರಾಯಚೂರು ಜಿಲ್ಲೆಯ ಇರಬಗೇರಾದ ರೈತ ಲಕ್ಷ್ಮಿ ರಂಗನಾಥ ಇವರ ಎತ್ತುಗಳು ಪ್ರಥಮ ರೂ.21000 ರೂ., ಜಿಲ್ಲೆಯ ನವಲಕಲ್ ಗ್ರಾಮದ ರೈತ ಎನ್.ಜಿ.ಕಿಚ್ಚಾನಾಯಕ ಇವರ ಎತ್ತುಗಳು ದ್ವಿತೀಯ ರೂ.15000 ರೂ., ನವಲಕಲ್ ಗ್ರಾಮದ ರಿಚ್ ಬಾಯ್ಸ ಇವರ ಎತ್ತುಗಳು ತೃತೀಯ ರೂ.11000 ರೂ. ನಗದು ಬಹುಮಾನ ಪಡೆದವು.

ಕಮೀಟಿಯ ಸದಸ್ಯರಾದ ವೀರಭದ್ರಪ್ಪ ನಾಲತವಾಡ , ಆದಪ್ಪ ನಾಲತವಾಡ , ದೊಡ್ಡಪ್ಪ ಗುಡದೂರ ,ಬಸನನಗೌಡ ಸರನಾಯಕ, ಮುತ್ತಣ್ಣ ಸರನಾಯಕ, ದೊಡ್ಡಪ್ಪ ಚಿಟ್ಟಿ ಇತರರಿದ್ದರು.