ಮಾಣಿ ಜಂಕ್ಷನ್‌ನಲ್ಲಿ ಮಳೆಗೆ ಬೃಹತ್ ಗಾತ್ರದ ಮರ ಬಿದ್ದು, 5 ವಿದ್ಯುತ್ ಕಂಬ ಮತ್ತು ಕೋಳಿ ಫಾರ್ಮ್ ಜಖಂಗೊಂಡಿದೆ. 
ಜಿಲ್ಲೆ

ಮರ ಬಿದ್ದು 5 ವಿದ್ಯುತ್ ಕಂಬ, ಕೋಳಿ ಫಾರ್ಮ್‌ಗೆ ಹಾನಿ

Vinod Kumar

ವಿಟ್ಲ: ಮಾಣಿ ಜಂಕ್ಷನ್‌ನಲ್ಲಿ ಮಳೆಗೆ ಬೃಹತ್ ಗಾತ್ರದ ಮರ ಬಿದ್ದು, 5 ವಿದ್ಯುತ್ ಕಂಬ ಮತ್ತು ಕೋಳಿ ಫಾರ್ಮ್‌ಗೆ ಹಾನಿಯಾಗಿದೆ. ಮಾಣಿ-ಮೈಸೂರು ಹೆದ್ದಾರಿಯ ಬದಿಯಲ್ಲಿದ್ದ ಅರುಣ್ ಎಂಬುವರ ಕೋಳಿ ಫಾರ್ಮ್‌ಗೆ ಸಂಪೂರ್ಣ ಹಾನಿಯಾಗಿದೆ.

ಮರ ಬೀಳುವ ಸಂದರ್ಭ ವಿದ್ಯುತ್ ತಂತಿಗೆ ಸಿಕ್ಕಿಹಾಕಿಕೊಂಡ ಕಾರಣದಿಂದ 5 ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ತುರ್ತು ಕಾರ್ಯ ನಡೆಸಲಾಗಿದ್ದು, ವಿದ್ಯುತ್ ಕಂಬಗಳನ್ನು ಮರು ಜೋಡಣೆ ಮಾಡಲಾಗಿದೆ.