ಉಪ್ಪಳ: ಚಿಪ್ಪಾರು ಕಡೆಂಕೋಡಿಯಲ್ಲಿ ರಸ್ತೆಗೆ ಮರ ಮುರಿದು ಬಿದ್ದು ಬಸ್ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮಂಗಳವಾರ ಬೆಳಗ್ಗೆ ರಸ್ತೆ ಬದಿಯ ಮರ ತುಂಡಾಗಿ ವಿದ್ಯುತ್ ತಂತಿ ಮೇಲೆ ಸಿಲುಕಿ ರಸ್ತೆಗೆ ಬಿದ್ದಿದೆ. ಇದರಿಂದ ಉಪ್ಪಳ ಲಾಲ್‌ಬಾಗ್ ಕುರುಡಪದವು ರೂಟ್‌ನಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತು. ಸಣ್ಣ ವಾಹನಗಳು ಸಂಚರಿಸುತ್ತಿದ್ದವು.
ಮರ ವಿದ್ಯುತ್ ತಂತಿಯಲ್ಲಿ ಸಿಲುಕಿಕೊಂಡಿರುವುದರಿಂದ ಅದನ್ನು ತೆರವುಗೊಳಿಸಲು ವಿಳಂಬವಾಗಿದೆ. ವಿದ್ಯುತ್ ಕಚೇರಿ ಸಿಬ್ಬಂದಿ ಅಪರಾಹ್ನ ಮರ ತೆರವುಗೊಳಿಸಿದರು. ಬಳಿಕ ಸಂಚಾರ ಪುನರಾರಂಭಗೊಂಡಿತು.
ಹಲವು ಕುಟುಂಬಗಳ ಸ್ಥಳಾಂತರ
ಉಳುವಾರು, ಬಂಬ್ರಾಣ ಬಯಲು ಪ್ರದೇಶದಲ್ಲಿ ನೀರು ತುಂಬಿಕೊಂಡಿದ್ದು, ಉಳುವಾರಿನಿಂದ 15 ಕುಟುಂಬಗಳನ್ನು, ಬಂಬ್ರಾಣ ಬಯಲು ಪ್ರದೇಶದಿಂದ 10 ಕುಟುಂಬಗಳನ್ನು ಅವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ.