handadi  
ಜಿಲ್ಲೆ

ಹಂದಾಡಿ ಕಾಲೋನಿ ರಸ್ತೆಯ ಮರ ತೆರವು

Karthika K.S

ಬ್ರಹ್ಮಾವರ: ಇಲ್ಲಿನ ಹಂದಾಡಿ ಬೇಳೂರುಜೆಡ್ಡು ಕಾಲೋನಿ ರಸ್ತೆಗೆ ಅಪಾಯಕಾರಿಯಾಗಿ ವಾಲಿಕೊಂಡಿದ್ದ ಅಕೇಶಿಯಾ ಮರವನ್ನು ಖಾಸಗಿ ಜಾಗದ ಮಾಲೀಕರೇ ಮಂಗಳವಾರ ತೆರವುಗೊಳಿಸಿದ್ದಾರೆ.

ಈ ಜಾಗದ ಬಳಿ ಇರುವ ರಸ್ತೆಯಲ್ಲಿ ನಿತ್ಯವೂ ನೂರಾರು ವಾಹನಗಳು, ಮಕ್ಕಳು ಸಂಚರಿಸುತ್ತಿದ್ದು, ಅಕೇಶಿಯಾ ಮರ ಅಪಾಯಕಾರಿಯಾಗಿ ವಾಲಿಕೊಂಡಿದ್ದರಿಂದ ಜನರು ಸಂಚರಿಸಲು ಹಿಂಜರಿಯುತ್ತಿದ್ದರು. ಸ್ಥಳೀಯರು ಈ ಕುರಿತು ಮನವಿ ಮಾಡಿದ್ದರೂ ಖಾಸಗಿ ಜಮೀನು ಮಾಲೀಕರು ಮರ ತೆರವಿಗೆ ಮುಂದಾಗಿರಲಿಲ್ಲ.

ಕೆಲವು ದಿನಗಳ ಹಿಂದಷ್ಟೇ ಈ ಕುರಿತು ‘ವಿಜಯವಾಣಿ’ ವಿಸ್ತೃತವಾಗಿ ವರದಿ ಮಾಡಿ ಸ್ಥಳೀಯಾಡಳಿತವನ್ನು ಎಚ್ಚರಿಸಿತ್ತು. ಇದೀಗ ಖಾಸಗಿ ಜಾಗದ ಮಾಲೀಕರೇ ಮರವನ್ನು ತೆರವು ಮಾಡಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸ್ಥಳೀಯರು ವಿಜಯವಾಣಿಯ ಕಳಕಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.