ಕುಕನೂರು ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಪ್ರಯಾಣಿಕರ ಸಂಖ್ಯೆ 500 ಕೋಟಿಗೆ ತಲುಪಿದ ಹಿನ್ನೆಯಲ್ಲಿ ಸೋಮವಾರ ಸಂಭ್ರಮ ಆಚರಿಸಲಾಯಿತು. ಗ್ಯಾರಂಟಿ ಯೋಜನೆ ಅನುಷಾನ ಸಮಿತಿ ತಾಲೂಕು ಅಧ್ಯಕ್ಷ ಸಂಗಮೇಶ ಗುತ್ತಿ, ಜಿಲ್ಲಾ ಉಪಾಧ್ಯಕ್ಷ ಖಾಸಿಂಸಾಬ್ ತಳಕಲ್, ಪಪಂ ಉಪಾಧ್ಯಕ್ಷ ಪ್ರಶಾಂತ ಆರುಬೆರಳಿನ್, ಡಿಪೋ ವ್ಯವಸ್ಥಾಪಕ ಬಿ.ಸೋಮಶೇಖರ, ಉಪತಹಸೀಲ್ದಾರ್ ಮುರುಳೀಧರಾವ್ ಕುಲಕರ್ಣಿ ಇದ್ದರು. 
ಜಿಲ್ಲೆ

ಸಾರಿಗೆ ಸಂಸ್ಥೆಗೆ ಶಕ್ತಿ ಯೋಜನೆಯಿಂದ ಲಾಭ

ಕುಕನೂರು: ಸಾರಿಗೆ ಸಂಸ್ಥೆಗೆ ಶಕ್ತಿ ಯೋಜನೆ ಉಪಯುಕ್ತವಾಗಿದ್ದು, ಇದರಿಂದ ನಷ್ಟದಲ್ಲಿದ್ದ ಕೆಎಸ್‌ಆರ್‌ಟಿಸಿ ಲಾಭ ಹೊಂದಲು ಸಾಧ್ಯವಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷಾನ ಸಮಿತಿ ತಾಲೂಕು ಅಧ್ಯಕ್ಷ ಸಂಗಮೇಶ ಗುತ್ತಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆ ಪ್ರಯಾಣಿಕರ ಸಂಖ್ಯೆ 500 ಕೋಟಿಗೆ ತಲುಪಿದ ಹಿನ್ನೆಲೆಯಲ್ಲಿ ಸೋಮವಾರ ಸಂಭ್ರಮಾಚರಿಸಿ ಮಾತನಾಡಿದರು.

ಕುಕನೂರು ಡಿಪೋವೊಂದರಲ್ಲೇ 2ವರ್ಷದಲ್ಲಿ 92ಲಕ್ಷ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ.

ಇದಕ್ಕೆ ಸರ್ಕಾರ 34 ಕೋಟಿ ರೂ. ಭರಿಸಿದೆ. ಇದರಿಂದ ಕೆಎಸ್‌ಆರ್‌ಟಿಸಿಗೆ ಲಾಭ ಹೆಚ್ಚಿದ್ದು, ಹೊಸ ಬಸ್ ಖರೀದಿ ಸಹ ಮಾಡುತ್ತಿದೆ ಎಂದರು. ಬಸ್‌ಗೆ ಪೂಜೆ ಸಲ್ಲಿಸಿ, ಸಿಹಿ ಹಂಚಲಾಯಿತು. ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಖಾಸಿಂಸಾಬ್ ತಳಕಲ್, ಪಪಂ ಉಪಾಧ್ಯಕ್ಷ ಪ್ರಶಾಂತ ಆರುಬೆಳಿನ್, ಡಿಪೋ ವ್ಯವಸ್ಥಾಪಕ ಬಿ.ಸೋಮಶೇಖರ, ಉಪತಹಸೀಲ್ದಾರ್ ಮುರುಳೀಧರಾವ್ ಕುಲಕರ್ಣಿ,

ಕಂದಾಯ ನಿರೀಕ್ಷಕ ರಂಗನಾಥ, ಪಪಂ ಸದಸ್ಯರಾದ ಸಿರಾಜ್ ಕರಮುಡಿ, ರಾಮಣ್ಣ ಬಂಕದಮನಿ, ಪ್ರಮುಖರಾದ ಸಿದ್ದಯ್ಯ ಕಳ್ಳಿಮಠ, ರೆಹಮಾನಸಾಬ್ ಮಕ್ಕಪ್ಪನವರ್, ವೀರಯ್ಯ ತೋಂಟದಾರ್ಯಮಠ, ಸಂತೋಷ ಬಿನ್ನಾಳ, ಅಮರೇಶ ತಲ್ಲೂರು, ಮಂಜುನಾಥ ಯಡಿಯಾಪೂರ, ಹೊನ್ನಪ್ಪ ಮರಡಿ ಇತರರಿದ್ದರು.