ಕಡಬ: ಸಮಾಜಸೇವೆಯಲ್ಲಿ ತೊಡಗಿರುವ ಪ್ರತಿ ವ್ಯಕ್ತಿಯ ಸಾಧನೆಗಳು ಸಮಾಜದಲ್ಲಿ ಗುರುತಿಸಲ್ಪಡುತ್ತಿದೆ. ಯೋಜನೆಯ ಕಾರ್ಯಕ್ರಮಗಳನ್ನು ಗ್ರಾಮಮಟ್ಟದಲ್ಲಿ ಅನುಷ್ಠಾನ ಮಾಡುತ್ತಿರುವ ಸೇವಾಪ್ರತಿನಿಧಿಗಳು ದುರ್ಬಲರ ಊರುಗೋಲಾಗಿ ಕೆಲಸ ನಿರ್ವಹಿಸಬೇಕು ಎಂದು ದ.ಕ ಜಿಲ್ಲಾ ಪುತ್ತೂರು ನಿರ್ದೇಶಕ ಬಾಬು ನಾಯ್ಕ ಹೇಳಿದರು.
ಕಡಬ ಶ್ರೀ ದುಗಾರ್ಂಬಿಕಾ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಸೇವಾಪ್ರತಿನಿಧಿಗಳ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಕಡಬ ತಾಲೂಕಿನ ಎಲ್ಲ ಕಾರ್ಯಕರ್ತರೂ ಒಗ್ಗಟ್ಟಾಗಿ ಶ್ರಮವಹಿಸಿದರೆ ಯಾವುದೇ ಸಾಧನೆಯನ್ನೂ ಮಾಡಲು ಸಾಧ್ಯ ಎಂದರು.
ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಜನಾರ್ದನ ಗೌಡ ಸದಸ್ಯರ ವಿವಾ ಸೌಲಭ್ಶಗಳ ಅನುಷ್ಠಾನದ ಕುರಿತಾಗಿ ಮಾಹಿತಿ ನೀಡಿದರು.
ಜಿಲ್ಲಾ ತಾಂತ್ರಿಕ ಪ್ರಬಂಧಕ ದಾದಾಫೀರ್ ಸೇವಾ ಪ್ರತಿನಿಧಿಗಳ ಮೊಬೈಲ್ ಆ್ಯಪ್ ಬಳಕೆ ಹಾಗೂ ಮೇಲ್ವಿಚಾರಕರ ದೈನಂದಿನ ಕೆಲಸದಲ್ಲಿ ತಂತ್ರಜ್ಞಾನ ಬಳಕೆ ಬಗ್ಗೆ ಮಾಹಿತಿ ನೀಡಿದರು. ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ನಿರ್ವಹಿಸಿದರು.