ಕಾಸರಗೋಡು: ಸಿರಿಬಾಗಿಲು ಪ್ರತಿಷ್ಠಾನದಲ್ಲಿ ತೆಂಕುತಿಟ್ಟು ಯಕ್ಷಗಾನ ಶಾಸ್ತ್ರೀಯ ನಾಟ್ಯ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ತೆಂಕುತಿಟ್ಟು ಯಕ್ಷಗಾನದ ನಾಟ್ಯ ಗುರುಗಳಿಗೆ ಎರಡನೆಯ ವಿಶೇಷ ತರಬೇತಿ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನದಲ್ಲಿ ನಡೆಯಿತು. 20ರಷ್ಟು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯಕ್ಷಗಾನದ ಚೌಕಿ ಪೂಜೆ ನಂತರ ಹಿಮ್ಮೇಳ ಹಾಗೂ ಕೋಡಂಗಿ ವೇಷದವರು ಹಿಂದಿನ ಕಾಲದಲ್ಲಿ ದೀಪದೊಂದಿಗೆ ರಂಗ ಪ್ರವೇಶಿಸುವ ವಿಧಾನ, ಅದರ ವಿಶೇಷತೆ, ಪೂರ್ವರಂಗದ ಕೆಲವು ಭಾಗಗಳು, ಪೂರ್ವರಂಗದಿಂದ ಇಂದು ವಿರಳವಾದ ಗಣಪತಿ ಕೌತುಕ ನಾಟ್ಯ ಕುಣಿತ, ಇದರ ಕುರಿತು ಅಭ್ಯಾಸ ಹಾಗೂ ಪ್ರಾತ್ಯಕ್ಷಿಕೆ ವಿಶ್ವೇಶ್ವರ ಭಟ್ ನಡೆಸಿಕೊಟ್ಟರು.