ಜಿಲ್ಲೆ

ಮತದಾನ ಕೇಂದ್ರ ಸಿಬ್ಬಂದಿಗೆ ತರಬೇತಿ

ಇಂದಿರಾ ಎನ್ ಕೆ

ಉಡುಪಿ: ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ದಿನದಂದು ಕರ್ತವ್ಯಕ್ಕೆ ನೇಮಕಗೊಂಡಿರುವ ಪಿಆರ್‌ಒ, ಎಪಿಆರ್‌ಒ ಹಾಗೂ ಪಿಒಗಳಿಗೆ ಮೇ 1ರಂದು ಬೈಂದೂರಿನ ನಿತ್ಯಾಧರ ನಗರದ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಎರಡನೇ ಹಂತದ ತರಬೇತಿ ಏರ್ಪಡಿಸಲಾಗಿದೆ.

ತರಬೇತಿಗೆ ನಿಯೋಜಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಾರ್ಯಾಗಾರಕ್ಕೆ ಕಡ್ಡಾಯವಾಗಿ ಆಗಮಿಸಬೇಕಿದ್ದು, ಆಗಮಿಸಲು ಅನುಕೂಲ ಆಗುವಂತೆ ಉಚಿತವಾಗಿ ಬಸ್ ವ್ಯವಸ್ಥೆ ವಾಡಲಾಗಿದೆ. ವಾಹಿತಿಗೆ ಮೊಬೈಲ್ ಸಂಖ್ಯೆ 8197028646, 8277404724, 8073752849 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.