ಜಿಲ್ಲೆ

ಹಳಿ ತಪ್ಪಿದ ಗೂಡ್ಸ್ ರೈಲು

Uttara Kannada - Subash Hegde

ಜೊಯಿಡಾ: ಕಲ್ಲಿದ್ದಲು ಹೊತ್ತು ಗೋವಾದಿಂದ ರಾಯಚೂರಿನೆಡೆ ಸಾಗುತ್ತಿದ್ದ ರೈಲು ಹಳಿ ತಪ್ಪಿದ ಘಟನೆ ತಾಲೂಕಿನ ಕ್ಯಾಸಲ್ ರಾಕ್ ಬಳಿ, ಹುಬ್ಬಳ್ಳಿ-ಮಡಗಾಂವ ಮಾರ್ಗದ ಬಳಿ ಶುಕ್ರವಾರ ನಡೆದಿದೆ.
ನೈರುತ್ಯ ರೈಲ್ವೆ ವ್ಯಾಪ್ತಿಯ ಲೋಂಡಾ-ವಾಸ್ಕೋ ಮಾರ್ಗದ ದೂದ ಸಾಗರ ಹಾಗೂ ಸೋನಾಲಿಮ್ ನಿಲ್ದಾಣದ ನಡುವೆ 11.30 ರ ಹೊತ್ತಿಗೆ ಘಟನೆ ನಡೆದಿದ್ದು 17 ಬೋಗಿಗಳು ಹಳಿಯಿಂದ ಕೆಳಗೆ ಜಾರಿವೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಈ ಮಾರ್ಗದಲ್ಲಿ ಸಾಯಂಕಾಲ ತೆರಳಬೇಕಿದ್ದ ವಾಸ್ಕೊ ನಿಜಾಮುದ್ದಿನ್ ರೈಲಿನ ಮಾರ್ಗ ಬದಲಾಯಿಸುವ ಸಾಧ್ಯತೆ ಇದೆ.