ಬೆಂಗಳೂರಿನ ರಸ್ತೆಯಲ್ಲಿ ಮ್ಯಾರಥಾನ್ ಓಟ ನಿರತ ಕಂಪ್ಲಿಯ ವಕೀಲ ಮೋಹನ್‌ಕುಮಾರ್ ದಾನಪ್ಪ 
ಜಿಲ್ಲೆ

ಸಂಚಾರದಲ್ಲಿ ಮೊಬೈಲ್ ಬಿಡಿ, ಜಾಗ್ರತೆಯಿಂದ ಮನೆಗೆ ನಡಿ

Kopala - Desk - Eraveni

ಕಂಪ್ಲಿ: ವಾಹನ ಚಾಲನೆ ಮಾಡುತ್ತ ಮೊಬೈಲ್ ಬಳಸುವುದು ಅಪರಾಧ ಎಂದು ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್‌ಕುಮಾರ ದಾನಪ್ಪ ಆ.15ರಂದು ಬೆಂಗಳೂರಿನಲ್ಲಿ ಮ್ಯಾರಥಾನ್ ಓಟ ನಡೆಸಿದ್ದಾರೆ.

ವಾಹನ ಚಾಲನಾ ಸಂದರ್ಭದಲ್ಲಿ ಮೊಬೈಲ್ ಬಳಕೆಯಿಂದಾಗಿ ಕೆಲ ಅಪಘಾತಗಳು ಸಂಭವಿಸುತ್ತಿರುವ ಹಿನ್ನಲೆ ಜಾಗೃತಿ ಮೂಡಿಸಲಿಕ್ಕಾಗಿ ಮ್ಯಾರಥಾನ್ ಓಟ ನಡೆಸಿದರು. ಬಲಗೈಯಲ್ಲಿ ರಾಷ್ಟ್ರಧ್ವಜ, ಎಡಗೈಯ್ಯಲ್ಲಿ ಸಂಚಾರದಲ್ಲಿ ಮೊಬೈಲ್ ಬಿಡಿ, ಜಾಗ್ರತೆಯಿಂದ ಮನೆಗೆ ನಡಿ ಎನ್ನುವ ಶೀರ್ಷಿಕೆಯ ಭಿತ್ತಿಫಲಕ ಹಿಡಿದು, ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ನಾನಾ ರಸ್ತೆಗಳ ಮೂಲಕ ವಿಧಾನಸೌಧತನಕ 14ಕಿ.ಮೀ.ನಷ್ಟು ದೂರವನ್ನು 2ಗಂಟೆ 14ನಿಮಿಷ ಏಕಾಂಗಿಯಾಗಿ ಓಟ ನಡೆಸಿ ಗಮನಸೆಳೆದರು.