ಕುಂದಾಪುರದ ಯುಬಿಎಂಸಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಸಾಂಪ್ರದಾಯಿಕ ದಿನವನ್ನು ಆಚರಿಸಲಾಯಿತು. 
ಜಿಲ್ಲೆ

ಯುಬಿಎಂಸಿ ಶಾಲೆಯಲ್ಲಿ ಸಾಂಪ್ರದಾಯಿಕ ದಿನ

ಇಂದಿರಾ ಎನ್ ಕೆ

ಕುಂದಾಪುರ: ಯುಬಿಎಂಸಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಸಾಂಪ್ರದಾಯಿಕ ದಿನ ಆಚರಿಸಲಾಯಿತು.ಸಿಎಸ್‌ಐ ಕೃಪಾ ಚರ್ಚ್‌ನ ಪ್ರೆಸ್‌ಬೈಟರ್ ಇನ್‌ಚಾರ್ಜ್ ಇಮ್ಯಾನುಯೆಲ್ ಜಯಕರ್ ಮಾತನಾಡಿದರು. ಸಿಎಸ್‌ಐ ಕೃಪಾ ವಿದ್ಯಾಲಯದ ಮುಖ್ಯಶಿಕ್ಷಕಿ ಸವಿತಾ, ಯುಬಿಎಂಸಿ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಸಿಎಸ್‌ಐ ಕೃಪಾ ವಿದ್ಯಾಲಯದ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜ ಶಾಲೆಯ ಸಂಚಾಲಕಿ ಐರೀನ್ ಸಾಲಿನ್ಸ್ ಶುಭಹಾರೈಸಿದರು. ಲತಾ ಸ್ವಾಗತಿಸಿದರು. ಸವಿತಾ ಆರ್. ವಂದಿಸಿದರು. ಉಜ್ವಲಾ ಕಾರ್ಯಕ್ರಮ ನಿರೂಪಿಸಿದರು.