ಜಿಲ್ಲೆ

Tourist Bus ಪಲ್ಟಿ 20 ಜನರಿಗೆ ಗಾಯ

ಹೊನ್ನಾವರ Tourist Bus overturnde : ಬೆಂಗಳೂರಿನಿಂದ ಗೋಕರ್ಣಗೆ ಬರುತ್ತಿದ್ದ ಪ್ರವಾಸಿಗರ ಬಸ್ಸು ತಾಲೂಕಿನ ಬಾಳೆಗದ್ದೆ (ರಾಷ್ಟ್ರೀಯ ಹೆದ್ದಾರಿ 69) ತಿರುವಿನಲ್ಲಿ ಪಲ್ಟಿಯಾಗಿ ಬಸ್ಸಿನಲ್ಲಿದ್ದ 20 ಜನರು ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಬೆಂಗಳೂರಿನಿಂದ ಬೆನಕ ಟ್ರಾವೇಲ್ಸ್ ಕಂಪನಿಯ ಬಸ್ಸಿನಲ್ಲಿ ಬೆಂಗಳೂರಿನ ಖಾಸಗೀ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ 20 ಜನರು ಕರಾವಳಿಯ ಗೋಕರ್ಣ ಮತ್ತಿತರ ಪ್ರವಾಸಿತಾಣಗಳಿಗೆ ಪ್ರಯಾಣಿಸುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ಅಪಾಯಕಾರಿ ಬಾಳೆಗದ್ದೆ ತಿರುವಿನಲ್ಲಿ ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದಿದೆ. ಗಾಯಗೊಂಡ 20 ಪ್ರಯಾಣಿಕರದಲ್ಲಿ 10 ಜನರು ಗಂಭೀರ ಗಾಯಗೊಂಡಿದ್ದು, ಇವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

Tourist Bus

ಉಳಿದ 10 ಪ್ರಮಾಣಿಕರಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿಗೆ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಬೆಂಗಳೂರು-ಹೊನ್ನಾವರದ ಹೆದ್ದಾರಿಯ ಸುಳಿಮುರ್ಕಿ ತಿರುವ, ಬಾಳೆಗದ್ದೆ ತಿರುವು ಮತ್ತು ಆರೊಳ್ಳಿ ಪಾಯಕಾರಿ ತಿರುವುಗಳಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ.

ಆಡಳಿತ ವ್ಯವಸ್ಥೆ ಇಲ್ಲಿ ಸೂಕ್ತ ಕ್ರಮ ಕೈಗೊಳ್ಳದೇ ಇರುವುದರಿಂದ ಜನರು ಅಪಘಾತಕ್ಕೀಡಾಗುತ್ತಿದ್ದಾರೆ. ಅಪಘಾತ ತಪ್ಪಿಸಬೇಕು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.