ಸಿಂಧನೂರು: ದೈಹಿಕ, ಮಾನಸಿಕ ಬೆಳವಣಿಗೆಗೆ ಎನ್ನೆಸ್ಸೆಸ್ ಶಿಬಿರಗಳು ಪೂರಕವಾಗಿವೆ ಎಂದು ತಿಡಿಗೋಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ದೀಪಾ ಅರಳಿಕಟ್ಟಿ ಹೇಳಿದರು.
ತಾಲೂಕಿನ ಕುರುಕುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ರಾಯಚೂರು ವಿಶ್ವವಿದ್ಯಾಲಯ, ನ್ಯಾಷನಲ್ ಪದವಿ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಆಯೋಜಿಸಿದ್ದ ವಿಶೇಷ ಶಿಬಿರದ ಉದ್ಘಾಟನೆ ನೆರವೆರಿಸಿ ಮಾತನಾಡಿದರು.
ಇದನ್ನೂ ಓದಿ: ಎನ್ನೆಸ್ಸೆಸ್ನಿಂದ ವಿದ್ಯಾರ್ಥಿಗಳು ಸಮಾಜಮುಖಿ
ಈ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಮನೋ ವಿಕಾಸ ಬೆಳೆಯುವ ಜತೆಗೆ ಸೇವೆಯ ಮಹತ್ವ ತಿಳಿಯಲಿದೆ. ಜೀವನದಲ್ಲಿ ಕಠಿಣ ಸವಾಲು ಎದುರಿಸಲು ಎನ್ನೆಸ್ಸೆಸ್ ಸ್ಫೂರ್ತಿಯಾಗಲಿದೆ. ಶಿಬಿರಾರ್ಥಿಗಳು ಶಿಬಿರದ ಸದುಪಯೋಗ ಪಡೆಯುವ ಜತೆಗೆ, ಪಂಚಾಯಿತಿ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ಮಾಹಿತಿ ತಿಳಿಯಬೇಕು ಎಂದರು. ಪ್ರಭಾರಿ ಮುಖ್ಯಶಿಕ್ಷಕ ನಾಗೇಶಕುಮಾರ ಮಾತನಾಡಿ, ಇದೊಂದು ಅತ್ಯುತ್ತಮ ಶಿಬಿರವಾಗಿದ್ದು ಗ್ರಾಮದಲ್ಲಿ ನೈರ್ಮಲ್ಯ ಕುರಿತು ಜನರಿಗೆ ಮಾಹಿದರು.
ತಿಳಿಸಿದರು. ಸಹ ಶಿಕ್ಷಕ ನಾಗರಾಜ, ಗ್ರಾಪಂ ಸದಸ್ಯ ಪಂಪಣ್ಣ ಹಲಗಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕ ಅಧಿಕಾರಿ ರವಿಕುಮಾರ ಮಸ್ಕ್ರಿಸ್ತಾವಿಕವಾಗಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಗುಡದಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಮಹಾಲಕ್ಷ್ಮೀ, ಮಂಜುನಾಥ ಇದ್ದರು.