ಎನ್ನೆಸ್ಸೆಸ್‌ನಿಂದ ವಿದ್ಯಾರ್ಥಿಗಳು ಸಮಾಜಮುಖಿ

18ss1udghne
ಶನಿವಾರಸಂತೆ ಸಮೀಪದ ಚಿಕ್ಕಕೊಳತ್ತೂರು ಶಾಲೆಯಲ್ಲಿ ಶನಿವಾರಸಂತೆ ಪದವಿ ಕಾಲೇಜಿನ ಎನ್ನೆಸ್ಸೆಸ್ ಘಟಕದಿಂದ ಆಯೋಜಿಸಿರುವ ವಾರ್ಷಿಕ ಶಿಬಿರವನ್ನು ಉಪನ್ಯಾಸಕ ಸುನೀಲ್ ಉದ್ಘಾಟಿಸಿದರು.
Published on

ಶನಿವಾರಸಂತೆ: ರಾಷ್ಟ್ರೀಯ ಸೇವಾ ಯೋಜನೆಯು ಯುವಜನರನ್ನು ಸಮಾಜಮುಖಿ ಮಾಡುವ ಅತ್ಯುತ್ತಮ ವೇದಿಕೆ ಎಂದು ಸೋಮವಾರಪೇಟೆ ಬಿಟಿಸಿಜಿ ಕಾಲೇಜಿನ ಉಪನ್ಯಾಸಕ ಎಂ.ಎಸ್.ಸುನೀಲ್ ಅಭಿಪ್ರಾಯಪಟ್ಟರು.

ಸಮೀಪದ ಚಿಕ್ಕಕೊಳತ್ತೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕದಿಂದ ಆಯೋಜಿಸಿರುವ ವಾರ್ಷಿಕ ಶಿಬಿರಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಎನ್ನೆಸ್ಸೆಸ್‌ನಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಜನ ಸಮುದಾಯದ ನಾಡಿಮಿತವನ್ನು ಅರಿಯಲು ಸಹಕಾರಿ ಆಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಸಂಸ್ಥೆ ಉಪಾಧ್ಯಕ್ಷ ಮಹಮ್ಮದ್ ಪಾಷ, ಎನ್ನೆಸ್ಸೆಸ್ ಶಿಬಿರಾರ್ಥಿಗಳು ಗ್ರಾಮಸ್ಥರ ಮನಸಿನಲ್ಲಿ ನೆನೆನಪಿನಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡಬೇಕು. ಆ ಮೂಲಕ ಸಾರ್ಥಕ ಭಾವ ಹೊಂದಬೇಕು ಎಂದು ಸಲಹೆ ನೀಡಿದರು.

ವಿದ್ಯಾಸಂಸ್ಥೆ ನಿರ್ದೇಶಕರಾದ ರಂಗಸ್ವಾಮಿ, ಕೆ.ಎನ್.ಜಗನ್‌ಪಾಲ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಇ.ಎಂ.ದಯಾನಂದ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಚಂದ್ರಶೇಖರ್, ಎಸ್‌ಡಿಎಂಸಿ ಅಧ್ಯಕ್ಷೆ ಮರಿಯಮ್ಮ, ಹಿರಿಯ ಉಪನ್ಯಾಸಕ ಎಸ್.ಎನ್.ಮೋಹನ್‌ಕುಮಾರ್, ಯೋಜನಾಧಿಕಾರಿ ಎಂ.ಎನ್.ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net