ಜಿಲ್ಲೆ

ಜೆಡಿಎಸ್​​ ನನಗೆ ಅಡ್ಜೆಸ್ಟ್​ ಆಗಲ್ಲ, ಕಾಂಗ್ರೆಸ್​ ಅಷ್ಟಕ್ಕಷ್ಟೇ, ಮುಂದೆ ಬಿಜೆಪಿಯಿಂದಲೇ ಸ್ಪರ್ಧೆ: ವರ್ತೂರ್ ಪ್ರಕಾಶ್

mahalakshmihm

ಕೋಲಾರ: ಮುಂದಿನ ಚುನಾವಣೆ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲಿದ್ದೇನೆ ಎಂದು ಹೇಳುವ ಮೂಲಕ ಬಿಜೆಪಿ ಸೇರ್ಪಡೆ ಕುರಿತು ವರ್ತೂರು ಪ್ರಕಾಶ್​ ಖಚಿತಪಡಿಸಿದರು.

ಕಾಂಗ್ರೆಸ್ ಸೇರ್ಪಡೆ ಕುರಿತು ಆ ಪಕ್ಷದ ಮುಖಂಡರನ್ನು ಭೇಟಿ ಮಾಡಿದರೂ ಪ್ರಯೋಜನ ಆಗಲಿಲ್ಲ, ಜೆಡಿಎಸ್ ನನಗೆ ಅಡ್ಜೆಸ್ಟ್ ಆಗೋಲ್ಲ.ಬಿಜೆಪಿಯವರು ಪಕ್ಷ ಸೇರಲು ಆಹ್ವಾನ ಕೊಟ್ಟಿದ್ದಾರೆ.ನಮ್ಮ ಕಾರ್ಯಕರ್ತರು ಸಹ ಒಪ್ಪಿದ್ದಾರೆ. ನಾಳೆ ಹತ್ತು ಗಂಟೆಗೆ ಮಲ್ಲೇಶ್ವರಂ ನ ಬಿಜೆಪಿ ಕಛೇರಿಯಲ್ಲಿ ಸೇರಲಿದ್ದೇನೆ ಎಂದರು.

ಮಾಲೂರಿನ ಮಾಜಿ ಶಾಸಕ ಮಂಜುನಾಥ್ ಗೌಡ ಮತ್ತು ನಾನು ಒಟ್ಟಿಗೆ ಪಕ್ಷ ಸೇರ್ಪಡೆ ಆಗಲಿದ್ದೇವೆ.ಮುಖ್ಯಮಂತ್ರಿ ಗಳ ಉಪಸ್ಥಿತಿ ಯಲ್ಲಿ ಪಕ್ಷ ಸೇರ್ಪಡೆ ಆಗಲಿದ್ದೇನೆ.ನಾಳೆಯಿಂದ ನಾನು ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಲಿದ್ದು, ನಾಳೆಯಿಂದ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟನೆ ನನ್ನ ಕೆಲಸ ಎಂದರು.

ನಾನೂ ಕೂಡ ಮೊದಲಿನಿಂದಲೂ ಹಿಂದುತ್ವ ಪಾಲಿಸಿಕೊಂಡು ಬಂದಿದ್ದೇನೆ. ಹಾಗಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದರು.