ಜಿಲ್ಲೆ

ಸಿಎಂ ಊರಿಗೆ ತೆರಳಿ ಎನ್ನುವ ಹೇಳಿಕೆ ನೀಡುತ್ತಲೇ ರಸ್ತೆಗಿಳಿದ ಸಾರ್ವಜನಿರು: ಎಲ್ಲ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತ

kumarvrl

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಸಾರ್ವಜನಿಕರಿಗೆ ತಮ್ಮ ಊರುಗಳಿಗೆ ತೆರಳಲು ಅನುಮತಿ ನೀಡುತ್ತಿದ್ದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮಂಗಳವಾರ ರಾತ್ರಿ ವೇಳೆಗೆ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಹಾಗೂ ಬೇರೆ ಕಡೆಗಳಿಂದ ಬೆಂಗಳೂರಿಗೆ ಬರುವವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಎಂ ಹೇಳಿಕೆ ನೀಡುತ್ತಿದ್ದಂತೆ ನಾಗರಿಕರು ತಮ್ಮ ಊರುಗಳತ್ತ ಹೊರಟರು. ಇದರಿಂದ ತುಮಕೂರು, ಮೈಸೂರು, ಮಾಗಡಿ, ಕನಕಪುರ, ಬಳ್ಳಾರಿ, ಕೋಲಾರ, ಹೊಸೂರು ರಸ್ತೆಗಳತ್ತ ಜನರು ಧಾವಿಸಿದರು. ಇದರಿಂದ ಸಂಚಾರ ದಟ್ಟಣೆ ಅಧಿಕವಾಯಿತು.

ಕೆಎಸ್​ಆರ್​ಟಿಸಿ ಬಸ್​ಗಳು ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರು ಖಾಸಗಿ ವಾಹನ ಬೈಕ್​ಗಳು ಹಾಗೂ ಕಾರುಗಳಲ್ಲಿ ತೆರಳುತ್ತಿದ್ದಾರೆ. ತುಮಕೂರು, ನೆಲಮಂಗಲ ಟೋಲ್​ ಬಳಿ ವಾಹನಗಳು ಸಾಲುಗಟ್ಟಿ ನಿಂತಿವೆ. ತುಮಕೂರು ರಸ್ತೆಯ 8ನೇ ಮೈಲಿಗಲ್ಲು ಬಳಿ ಇರುವ ಬಸ್​ ನಿಲ್ದಾಣದಲ್ಲಿ ನೂರಾರು ಮಂದಿ ಬಸ್​ಗಾಗಿ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ನಗರ ಲಾಕ್​ಡೌನ್​ ಮಾಡುವ ಘೋಷಣೆ ಹೊರ ಬೀಳುತ್ತಿದ್ದಂತೆ ಜನರು ಮನೆ ಸೇರಿಕೊಂಡಿದ್ದರು. ರಸ್ತೆಯಲ್ಲಿ ಸಂಚರಿಸುವವರನ್ನು ಪೊಲೀಸರು ನಿಯಂತ್ರಿಸಿದ್ದರು. ಸಿಎಂ ಘೋಷಣೆ ಹೊರಬೀಳುತ್ತಲೇ ಜನರ ಊರಿನತ್ತ ಹೊರಟಿದ್ದಾರೆ. (ದಿಗ್ವಿಜಯ ನ್ಯೂಸ್​)