ಮೂಲ್ಕಿ: ವಿದ್ಯಾರ್ಥಿಗಳಲ್ಲಿ ಸಂಘಟನೆ, ಸಹಕಾರಿ ಗುಣ ಹೊಂದಿದ ನಾಯಕತ್ವದ ಮೌಲ್ಯಗಳನ್ನು ಗಳಿಸಲು ಕಾಲೇಜು ವಿದ್ಯಾರ್ಥಿ ಸಂಘ ಉತ್ತಮ ವೇದಿಕೆ ಎಂದು ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಹಸನಬ್ಬ ಹೇಳಿದರು.
ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟಕರಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು ವಿದ್ಯಾರ್ಥಿ ಸಂಘದಿಂದಸಾಧ್ಯ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ವಿವಿಧ ಸಂಘಗಳ ಪ್ರತಿನಿಧಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳಿ ಅಧ್ಯಕ್ಷತೆ ವಹಿಸಿದ್ದರು.ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ಡಾ.ರೇಖಾ ಬಿ ಎಸ್, ಮತದಾರ ಸಾಕ್ಷರತಾ ಸಂಘ ವಿನೋದ್ ನಾಯಕ್, ರೆಡ್ ಕ್ರಾಸ್ ಘಟಕದ ಕೌನ್ಸಿಲರ್ ರಮಾನಂದ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ನಾಯಕನಾಗಿ ದ್ವಿತೀಯ ವಾಣಿಜ್ಯ ವಿಭಾಗದ ಗಣೇಶ್, ಕಾರ್ಯದರ್ಶಿಯಾಗಿ ಸುಮಿತ್, ಪ್ರಸನ್ನ ಆಚಾರ್ಯ ದ್ವಿತೀಯ ಕಲಾವಿಭಾಗ ವೇದಿಕೆಯಲ್ಲಿದ್ದರು. ದ್ವಿತೀಯ ವಿಜ್ಞಾನ ವಿಭಾಗದ ನಂದಿನಿ ನಿರೂಪಿಸಿ, ನಿಖಿಲ್ ವಂದಿಸಿದರು.