ಜಿಲ್ಲೆ

ವಿದ್ಯಾರ್ಥಿಗಳ ಜತೆ ಹೆಜ್ಜೆ ಹಾಕಿದ ಉಪನ್ಯಾಸಕರು !!

ತುಮಕೂರು: ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಎಥ್ನಿಕ್ ಡೇ’ನಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳ ಮೂಲಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಿಂಚಿ ಸಂಭ್ರಮಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎಲ್ಲೆಲ್ಲು ವಿದ್ಯಾರ್ಥಿಗಳ ಕಲರವ. ವಿದ್ಯಾರ್ಥಿನಿಯರು ಬಣ್ಣಬಣ್ಣದ ಸೀರೆ ಉಟ್ಟು ಮಿಂಚಿದರೆ, ವಿದ್ಯಾರ್ಥಿಗಳು ಪಂಚೆ, ಶಲ್ಯ ಹಾಕಿ ವಿಶೇಷ ಗೆಟಪ್‌ನಲ್ಲಿ ಕಂಡುಬಂದರು. ರಾರಾ ರಕ್ಕಮ್ಮ.. ಲುಂಗಿ ಡ್ಯಾನ್ಸು.. ಪ್ಯಾರ್ಗೆ ಆಗ್ಬಿಟ್ಟೈತೆ.. ವಿವಿಧ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿ ಸಂಭ್ರಮಿಸಿದರು.

ವಿದ್ಯಾರ್ಥಿಗಳ ಜತೆ ಉಪನ್ಯಾಸಕರ ಹೆಜ್ಜೆ !: ಇನ್ನೂ ಫ್ಯಾಶನ್ ಶೋಗೆ ಹಾಕಿದ್ದ ರಾಂಪ್ ಮೇಲೆ ವಿದ್ಯಾರ್ಥಿಗಳ ಜತೆ ಉಪನ್ಯಾಸಕರು ಹೆಜ್ಜೆ ಹಾಕಿ ಖುಷಿಪಡಿಸಿದರು. ಪ್ರಾಧ್ಯಾಪಕರು ಕೂಡ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಫೋಟೋಗೆ ಪೋಸ್ ನೀಡಿ ಖುಷಿಪಟ್ಟರಲ್ಲದೆ, ಕಾಲೇಜು ದಿನಗಳ ಸಂಭ್ರಮವನ್ನು ಹಂಚಿಕೊಂಡರು.

ಪ್ರಾಂಶುಪಾಲರಾದ ಡಾ.ಕೆ.ಬಿ. ಸರಸ್ವತಿ, ಪ್ರಾಧ್ಯಾಪಕರುಗಳಾದ ಡಾ.ರೇಣುಕ ಪ್ರಸಾದ್, ಡಾ. ಚಿಕ್ಕಹೆಗ್ಢೆ ,ಡಾ.ಕುಮಾರಸ್ವಾಮಿ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.