ಹೆಬ್ರಿ: ಅಜೆಕಾರಿನ ಮಂಜುಶ್ರೀ ಕ್ರಶರ್‌ನಲ್ಲಿ ರೈಟರ್ ಕೆಲಸ ಮಾಡುತ್ತಿದ್ದ ಹೆಬ್ರಿಯ ಮಿಥುನ್(26) ಎಂಬುವರ ಕಾಲಿನ ಮೇಲೆ ಟಿಪ್ಪರ್ ಚಲಿಸಿ ಗಂಭೀರ ಗಾಯಗೊಂಡಿದ್ದಾರೆ. ಇತ್ತೀಚೆಗೆ ಬೆಳಗ್ಗೆ ನಜರ್ ಅಹಮ್ಮದ್ ಎಂಬಾತ ಟಿಪ್ಪರಿನಲ್ಲಿ ಜಲ್ಲಿ ತುಂಬಿಸಲು ಕ್ರಶರ್‌ಗೆ ಬಂದಿದ್ದ ವೇಳೆ ಜಲ್ಲಿ ತುಂಬಿಸಲು ಟಿಪ್ಪರ್ ಹಿಂತೆಗೆಯುವ ಸಂದರ್ಭ ಎಡಭಾಗದಲ್ಲಿ ನಿಂತುಕೊಂಡಿದ್ದ ಮಿಥುನ್‌ಗೆ ತಾಗಿದ್ದು, ಅವರು ಬಿದ್ದಿದ್ದಾರೆ. ಪರಿಣಾಮ ಲಾರಿಯ ಮುಂಭಾಗದ ಚಕ್ರ ಅವರ ಬಲ ಕಾಲಿನ ಮೇಲೆ ಚಲಿಸಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.