ಹನುಮಸಾಗರದಲ್ಲಿ ಶುಕ್ರವಾರ ಸಂಜೆ ಬಿಸಿದ ಮಳೆ ಗಾಳಿಗೆ ವಿದ್ಯುತ್ ಕಂಬ ಬಿದ್ದಿರುವುದು. 
ಜಿಲ್ಲೆ

ಗುಡುಗು ಸಿಡಿಲುಗಳ ಆರ್ಭಟ

Kopala - Desk - Eraveni

ಹನುಮಸಾಗರ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಿದೆ.

ಮಳೆ ಆರಂಭಕ್ಕೂ ಮುನ್ನ ಬಿಸಿದ ಬಿರುಗಾಳಿಗೆ ಹನುಮಸಾಗರದ ಆಯಲ್ ಮೀಲ್ ಹತ್ತಿರ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಗಾಳಿ, ಗುಡುಗು ಸಿಡಿಲುಗಳ ಆರ್ಭಟಕ್ಕೆ ಜನರು ಭಯ ಭೀತರಾಗಿದ್ದರು.

ಗಾಳಿ ಜೋರಾಗಿ ಬಿಟ್ಟಿದ್ದರಿಂದ ರೈತರು ಜಮೀನಿನಲ್ಲಿ ಸಂಗ್ರಹಿಸಿಕೊಂಡಿದ್ದ ಮೇವಿನ ಮೇಲೆ ಹಾಕಿದ್ದ ತಾಡಪಲಗಳು ಗಾಳಿಯಲ್ಲಿ ಹಾರಿಹೋಗಿ ತೊಂದರೆ ಅನುಭವಿಸುವಂತಾಯಿತು. ಗಾಳಿಯ ರಭಸಕ್ಕೆ ಬಹಳಷ್ಟು ಕಡೆ ಮರಗಳು ನೆಲಕಚ್ಚಿವೆ.