ಬೆಂಗಳೂರು: ರಕ್ತ ಚಂದನವನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದವರನ್ನು ಸೆರೆ ಹಿಡಿದಾಗ, ಮೂರು ವರ್ಷಗಳ ಹಿಂದಿನ ಕೊಲೆ ಪ್ರಕರಣವೊಂದರ ರಹಸ್ಯ ಬಯಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚಂದನ ಕಳ್ಳಸಾಗಣೆ ಪ್ರಕರಣದಡಿಯಲ್ಲಿ ಓರ್ವ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ‘ವಾರ್ ಆ್ಯಂಡ್ ಪೀಸ್’ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಶವವಾದ ಯಂಗ್ ಗ್ಲೋಬಲ್ ಲೀಡರ್ ಡಾ.ಶೀತಲ್ ಆಮ್ಟೆ!
ಸುಹೇಲ್ ಖಾನ್, ಅಬ್ದುಲ್ ಬಸೀರ್ ಮತ್ತು ಅನೀಸಾ ಫಾತಿಮಾ ಟಾಟಾ ಏಸ್ ವಾಹನದಲ್ಲಿ ಬೆಂಗಳೂರಿನ ಆರ್ಟಿ ನಗರದಿಂದ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಸುಮಾರು 502 ಕೆ.ಜಿ ರಕ್ತ ಚಂದನವನ್ನು ಗಾಡಿಯಲ್ಲಿ ತುಂಬಿಕೊಳ್ಳಲಾಗಿತ್ತು. ಆರೋಪಿಗಳನ್ನು ಸೆರೆ ಹಿಡಿದಿರುವ ಪೊಲೀಸರು ವಾಹನವನ್ನು ಮತ್ತು ರಕ್ತ ಚಂದನದ ಮರದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಕರೊನಾ ನಂತರ ಮೊದಲನೇ ಬಾರಿ ವಾರಣಾಸಿಗೆ ಭೇಟಿ ಕೊಟ್ಟ ಪ್ರಧಾನಿ ಮೋದಿ; ಆರು ಲೇನ್ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ
ಈ ಆರೋಪಿಗಳ ವಿಚಾರಣೆ ವೇಳೆ ಇನ್ನೊಂದು ಪ್ರಕರಣದ ರಹಸ್ಯವೂ ಬಿಚ್ಚಿಕೊಂಡಿದೆ. 2017ರಲ್ಲಿ ನೂರ್ ಎಂಬಾತನನ್ನ ಕಿಡ್ನಾಪ್ ಮಾಡಿ ಗೌರಿಬಿದನೂರಿನ ಫಾರ್ಮ್ ಹೌಸ್ನಲ್ಲಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳ ಪೈಕಿ ಸುಹೇಲ್ ಖಾನ್ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನೊಂದಿಗೆ ಬೇರೆ ಮೂವರು ಆರೋಪಿಗಳು ಸೇರಿಕೊಂಡು ಕೊಲೆ ಮಾಡಿದ್ದಾಗಿ ಆತ ಬಾಯಿಬಿಟ್ಟಿದ್ದಾನೆ.
ಭಾನುವಾರ ರಾತ್ರಿ ಹೆಚ್ಎಂಟಿ ಲೇಔಟ್ನಲ್ಲಿ ಅಕ್ರಮವಾಗಿ ಮರಗಳನ್ನ ಸಾಗಾಟ ಮಾಡಡುತ್ತಿರುವುದಾಗಿ ಕರೆ ಬಂದಿತ್ತು. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಮಹಿಳಾ ಪಿಎಸ್ಐ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಟಾಟ ಏಸ್ ಟೇಂಪೋದಲ್ಲಿ 502 ಕೆಜಿ ರಕ್ತಚಂದನ ಮರದ ತುಂಡುಗಳು ಪತ್ತೆಯಾಗಿದೆ. ಅಕ್ರಮವಾಗಿ ಸಾಗಾಟ ಮಾಡಲು ಯತ್ನಸುತ್ತಿದ್ದ ಓರ್ವ ಮಹಿಳೆ ಸೇರಿ ಮೂವರನ್ನ ಬಂಧಿಸಲಾಗಿದೆ. ಇದರಲ್ಲಿ ಆರೋಪಿಯಾಗಿರುವ ಸುಹೇಲ್ ಖಾನ್ ಕೊಲೆ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದಾನೆ. ಆ ಪ್ರಕರಣದ ಉಳಿದ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಇದೀಗ ಅವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.