ಸಾಂದರ್ಭಿಕ ಚಿತ್ರ 
ಜಿಲ್ಲೆ

ಕಪ್ಪೆ ಚಿಪ್ಪೇ ಪ್ರಾಣಕ್ಕೆ ಮುಳುವಾಯ್ತು; ಒಟ್ಟಿಗೇ ಸಾವಿಗೀಡಾದ್ರು ಮೂವರು ಸಂಬಂಧಿಕರು..

Webdesk - Ravikanth

ಉತ್ತರಕನ್ನಡ: ಕಪ್ಪೆ ಚಿಪ್ಪೇ ಪ್ರಾಣಕ್ಕೆ ಮುಳುವಾಗಿದ್ದು, ಮೂವರು ಸಂಬಂಧಿಕರು ಒಟ್ಟಿಗೇ ಸಾವಿಗೀಡಾದ ದುರಂತ ಪ್ರಕರಣವೊಂದು ಸಂಭವಿಸಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಈ ಅವಘಡ ಉಂಟಾಗಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಗ್ರಾಮ ಕಡಕಾರ ನಿವಾಸಿ ಪೂಜಾ ಮಹೇಶ ನಾಯ್ಕ, ಕುಮಟಾ ಕೋನಳ್ಳಿ ನಿವಾಸಿ ದಿಲೀಪ ನಾಯ್ಕ, ಅಘನಾಶಿನಿ ನಿವಾಸಿ ನಾಗೇಂದ್ರ ನಾಯ್ಕ ಸಾವಿಗೀಡಾದ ದುರ್ದೈವಿಗಳು.

ಅಂಕೋಲಾ ತಾಲೂಕಿನ ಕರಿಕಲ್ ಕಡಕಾರ ಬಳಿಯ ಗಂಗಾವಳಿ ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿ ಈ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಪಿಯುಸಿ ವಿದ್ಯಾರ್ಥಿನಿ ಪೂಜಾ, ದಿಲೀಪ ಮತ್ತು ನಾಗೇಂದ್ರ ಅವರ ಶವಗಳು ಗಂಗಾವಳಿ ನದಿಯಲ್ಲಿ ಪತ್ತೆಯಾಗಿವೆ. ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.