ಜಿಲ್ಲೆ

ಕ್ರಿಕೆಟ್ ಆಡುವಾಗ ಕೆರೆಗೆ ಬಿದ್ದ ಬಾಲ್, ನಂತರ ಆಗಿದ್ದು ಘೋರ ದುರಂತ...!​

theerthaswamy

ಆನೇಕಲ್: ಕೆರೆಗೆ ಬಿದ್ದ ಕ್ರಿಕೆಟ್ ಬಾಲ್ ತರಲು ಹೋದ ಮೂವರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಇಗ್ಗಲೂರು ಕೆರೆಯಲ್ಲಿ ನಡೆದಿದೆ.

ಅಮಿತ್ ಕುಮಾರ್ (31), ರಿಷಿತೇಷ್ (9), ಧೀಮಂತ್ (13) ಮೃತ ದುರ್ದೈವಿಗಳು. ಮೃತರೆಲ್ಲರೂ ಉತ್ತರ ಭಾರತ ಮೂಲದವರಾಗಿದ್ದು, ಇಗ್ಗಲೂರು ಚಂದ್ರಕಾಂತ್ ಲೇಔಟ್ ನಲ್ಲಿ ವಾಸವಿದ್ದರು.
ಇಂದು ಕ್ರಿಕೆಟ್ ಆಟ ಆಡುವಾಗ ಬಾಲ್ ಕೆರೆಗೆ ಹೋಗಿತ್ತು. ಕೆರೆಗೆ ಬಿದ್ದ ಬಾಲ್ ತೆಗೆದುಕೊಳ್ಳಲು ಹೋದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ಸ್ಥಳಕ್ಕೆ ಸೂರ್ಯನಗರ ಪೋಲಿಸರು ಭೇಟಿ ನೀಡಿದ್ದು, ದೂರು ದಾಖಲಿಸಿದ್ದಾರೆ.