ಜಿಲ್ಲೆ

ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಬಿಮ್ಸ್ ವೈದ್ಯರು ಸೇರಿ ಮೂವರು ಸ್ಥಳದಲ್ಲೇ ದುರ್ಮರಣ: ಓರ್ವ ವೈದ್ಯನ ಸ್ಥಿತಿ ಗಂಭೀರ | Car Accident

ರಮೇಶ್​ ಕುಮಾರ್​​ ಬಿ ಎಡಮೋಳೆ

Car Accident : ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಬಿಮ್ಸ್ ವೈದ್ಯರು ಸೇರಿ ಮೂವರು ಸ್ಥಳದಲ್ಲೇ ದುರಂತ ಸಾವಿಗೀಡಾಗಿರುವ ಘಟನೆ ಕರ್ನಾಟಕ ಗಡಿಯ ಆಂಧ್ರ ಪ್ರದೇಶದ ವಿಡಪನಕಲ್ಲು ಸಮೀಪದಲ್ಲಿ ಭಾನುವಾರ (ಡಿ.01) ನಡೆದಿದೆ.

ಮೃತರನ್ನು ಬಿಮ್ಸ್ ಅಂಕೋಲಾಜಿ ವಿಭಾಗದ ಗೋವಿಂದರಾಜುಲು, ಅರ್ಕಾಲಾಜಿ ವಿಭಾಗದ ಯೋಗೀಶ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ವ್ಯಕ್ತಿ ವೆಂಕಟ ನಾಯುಡು ಕೂಡ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ವೈದ್ಯ ಅಮರೇಗೌಡ ಪಾಟೀಲ್ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ನಿಯಂತ್ರಣದ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಘಟನೆ ಆಂಧ್ರದ ವಿಡಪನಕಲ್ಲು ಸಮೀಪದ ಅನಂತಪುರ ರಸ್ತೆಯಲ್ಲಿ ನಡೆದಿದೆ.

ಮೃತದೇಹಗಳನ್ನು ಬಳ್ಳಾರಿಗೆ ತೆಗೆದುಕೊಂಡು ಬರಲಾಗುತ್ತಿದೆ. ಕಾರಿನ ಅಪಘಾತಕ್ಕೆ ಕಾರಣವೇನು? ಮೃತರು ಎಲ್ಲಿಗೆ ಪ್ರಯಾಣಿಸುತ್ತಿದ್ದರು ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.