ಸಾಂದರ್ಭಿಕ ಚಿತ್ರ  
ಜಿಲ್ಲೆ

ಏಡಿ ಹಿಡಿಯಲು ಹೋದ ಒಂದೇ ಮನೆಯ ಮೂವರು ಮಕ್ಕಳ ಸಾವು!

ತುಮಕೂರು: ಕೆರೆಯಲ್ಲಿ ಏಡಿ ಹಿಡಿಯಲು ಹೋಗಿದ್ದ ಒಂದೇ ಮನೆಯ ಮೂವರು ಮಕ್ಕಳು ಸಾವಿಗೀಡಾದ ದುರಂತವೊಂದು ಸಂಭವಿಸಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೇವರಾಯನ ಕೊಪ್ಪದಲ್ಲಿ ಈ ಘಟನೆ ನಡೆದಿದೆ.

ಬಾಷಾ ಎನ್ನುವವರ ಮಕ್ಕಳಾದ ಶರೀಫ್ (10), ಬಾನುವಿ (13), ಚಾಂದವಿ (14) ಸಾವಿಗೀಡಾದವರು. ಇವರು ಇಂದು ಇಲ್ಲಿನ ಕೆರೆಯಲ್ಲಿ ಏಡಿ ಹಿಡಿಯಲು ಹೋಗಿದ್ದರು. ಆ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಸಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.