ದಾವಣಗೆರೆ: ಮೋಜಿಗೆಂದು ಈಜಿಗಿಳಿದು ನೀರುಪಾಲಾಗುತ್ತಿರುವ, ಮುಳುಗಿ ಸಾಯುತ್ತಿರುವ ಪ್ರಕರಣಗಳು ಮುಂದುವರಿದಿದ್ದು, ಇಂದು ಅಂಥದ್ದೇ ಇನ್ನೊಂದು ಪ್ರಕರಣ ವರದಿಯಾಗಿದೆ. ಈ ಪ್ರಕರಣದಲ್ಲಿ ಮೂವರು ನೀರುಪಾಲಾಗಿದ್ದಾರೆ. ದಾವಣಗೆರೆಯ ಜಗಳೂರಿನಲ್ಲಿ ಈ ಪ್ರಕರಣ ನಡೆದಿದೆ.'
ಒಟ್ಟು ನಾಲ್ವರು ಇಂದು ಮಧ್ಯಾಹ್ನ ಕೆರೆಯಲ್ಲಿ ಈಜಲು ಹೋಗಿದ್ದರು. ಆ ಪೈಕಿ ಒಬ್ಬ ಸ್ವಲ್ಪಹೊತ್ತಿನ ಬಳಿಕ ಮನೆಗೆ ಹೋಗಿದ್ದ. ಉಳಿದ ಮೂವರು ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಹೀಗಾಗಿ ಆತ ಕೆರೆಗೆ ಬಂದು ನೋಡಿದಾಗ ಚಪ್ಪಲಿ-ಬಟ್ಟೆಗಳು ದಡದಲ್ಲೇ ಇದ್ದವು. ಇದರಿಂದ ಗಾಬರಿಗೊಂಡ ಆತ ಪಾಲಕರಿಗೆ ಮಾಹಿತಿ ನೀಡಿದ್ದ.
ಇದನ್ನೂ ಓದಿ: ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್ಸ್ಪೆಕ್ಟರ್’ ಝಾನ್ಸಿ..
ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಫಯಾಜ್ (12) ಎಂಬವನ ಶವ ಪತ್ತೆಯಾಗಿದೆ. ಉಳಿದಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.