ಚರಣ್​ರಾಜ್, ಹಾಲೇಶ್​ 
ಜಿಲ್ಲೆ

ಜಲಾಶಯ ವೀಕ್ಷಣೆಗೆ ಬಂದಿದ್ದ ಇಬ್ಬರು ನಾಪತ್ತೆ; ಈಜು ಬರದ ಅವರಿಬ್ಬರಿಗಾಗಿ ಹುಡುಕಾಟ..

Video - Jyothi Bhat

ವಿಜಯನಗರ: ಜಲಾಶಯ ವೀಕ್ಷಣೆ ಮಾಡಲು ಬಂದವರಿಬ್ಬರು ನಾಪತ್ತೆ ಆಗಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಇಂದು ಈ ಪ್ರಕರಣ ನಡೆದಿದ್ದು, ಅವರಿಗಾಗಿ ಹುಡುಕಾಟ ಆರಂಭವಾಗಿದೆ.

ಕೊಟ್ಟೂರು ಮೂಲದವರೆಂದು ಹೇಳಲಾದ ಎಂ.ಆರ್. ಹಾಲೇಶ್ (34), ಚರಣ್ ರಾಜ್ (33) ನಾಪತ್ತೆಯಾದವರು. ಇವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯ ವೀಕ್ಷಣೆಗೆ ಆಗಮಿಸಿದ್ದರು. ಒಟ್ಟು ಐವರು ವೀಕ್ಷಣೆಗೆ ಬಂದಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದ ಇಬ್ಬರಿಗೂ ಈಜು ಬರುತ್ತಿಲ್ಲ. ಅವರ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಲ್ಲಿನ ಸಿಪಿಐ ಮಂಜುನಾಥ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.