ಜಿಲ್ಲೆ

ಬ್ಯಾಗ್‌ಗಳಿಂದ ಹಣ ದೋಚುತ್ತಿದ್ದ ಖತರ್‌ನಾಖ್‌ ಕಳ್ಳಿಯರು ಅಂದರ್‌

Uttara Kannada - Subash Hegde

ಮುಂಡಗೋಡ: ಹಣ ಹಾಗೂ ಬಂಗಾರದ ಆಭರಣ ಕಳ್ಳತನ ಮಾಡಿದ್ದ ಇಬ್ಬರು ಅಂತರ ಜಿಲ್ಲಾ ಕಳ್ಳಿಯರು ಮುಂಡಗೋಡ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶನಿವಾರ ಅವರನ್ನು ಬಂಧಿಸಿ, ಬಂಗಾರ ಹಾಗೂ ಹಣ ವಶಕ್ಕೆ ಪಡೆದಿದ್ದಾರೆ.

ಶಿವಮೋಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತನಗರ ಸರ್ಕಾರಿ ಕನ್ನಡ ಶಾಲೆಯ ಸನಿಹದ ನಿವಾಸಿ ಶಾಂತಿ ವೆಂಕಟರಮಣ ಕಲ್ಲವಡ್ಡರ್, ಮೀನಾಕ್ಷಿ ಪರಮೇಶ ಕಲ್ಲವಡ್ಡರ್‌ ಬಂಧಿತರು.

2022ರ ಮೇ.16ರಂದು ಬೆಳಗ್ಗೆ 11ಗಂಟೆಯ ಸಮಯಕ್ಕೆ ತಾಲೂಕಿನ ಚಿಗಳ್ಳಿ ಗ್ರಾಮದ ಶೃತಿ ಬಶೇಟ್ಟೆಪ್ಪ ಅರಳಿಕಟ್ಟಿ ಎಂಬವರು ಎಸ್‌ಬಿಐ ನಿಂದ 49 ಸಾವಿರ ರೂ.ಹಣ ತೆಗೆದುಕೊಂಡು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡು ಕೋರ್ಟ್‌ ಮುಂಭಾಗದ ಜರಾಕ್ಸ್‌ ಅಂಗಡಿಗೆ ಬಂದು ಜರಾಕ್ಸ್‌ ಮಾಡಿಸಿದ ಹಣ ನೀಡಲು ಬ್ಯಾಗ್ ತೆಗೆದಾಗ ಬ್ಯಾಗ್‌ನಲ್ಲಿನ ಹಣ ಕಳ್ಳತನವಾಗಿರುವುದು ಕಂಡು ಬಂದಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಈ ಕುರಿತು ತನಿಖೆ ನಡೆಸಿದ ಪೊಲೀಸರು ಇಬ್ಬರು ಕಳ್ಳಿಯರನ್ನು ಬಂಧಿಸಿದ್ದಾರೆ ಬಂಧಿತ ಕಳ್ಳಿಯರು ಎರಡುತಿಂಗಳಲ್ಲಿ ಶಿರಸಿ ನಿಲೆಕಣಿ ಬಸ್ ನಿಲ್ದಾಣದಲ್ಲಿಯೂ  ಸಹ ಬಂಗಾರದ  ಆಭರಣಗಳನ್ನು ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇಬ್ಬರು ಕಳ್ಳಿಯರಿಂದ ನೂರುಗ್ರಾಂ ಬಂಗಾರದ ಆಭರಣಗಳು ಹಾಗೂ ಇಪ್ಪತ್ತು ಸಾವಿರರೂ. ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್‌ಪಿ ಎನ್‌.ವಿಷ್ಣುವರ್ಧನ, ಹೆಚ್ಚುವರಿ ಎಸ್‌ಪಿಗಳಾದ ಸಿ.ಟಿ.ಜಯಕುಮಾರ್,ಎನ್‌.ಜಗದೀಶ, ಶಿರಸಿ.ಡಿವೈಎಸ್‌ಪಿ. ಗಣೇಶ ಕೆ.ಎಲ್‌. ಮಾರ್ಗದರ್ಶನದಲ್ಲಿ ಸಿಪಿಐ.ಬಿ.ಎಸ್.ಲೋಕಾಪುರ,ಪಿಎಸ್‌ಐ ಪರಶುರಾಮ ಮಿರ್ಜಗಿ, ಹನುಮಂತ ಕುಡಗುಂಟಿ, ಸಿಬ್ಬಂದಿ ಗಂಗಾಧರ ಹೊಂಗಲ, ಗೀತಾ ಕಲಘಟಗಿ,ಗಣಪತಿ ಹೊನ್ನಳ್ಳಿ,ಕೋಟೇಶ್ವರ ನಾಗರವಳ್ಳಿ, ಅಣ್ಣಪ್ಪ ಬುಡಗೇರಿ, ಮಹಾಂತೇಶ ಮುಧೋಳ,ತಿರುಪತಿ, ಜ್ಯೋತಿ ಬನವಾಸಿ, ಪುಷ್ಪಾ, ಶಾಲಿನಿ,ರೇಖಾ ಆರೋಪಿಗಳ ಪತ್ತೆಗೆ ಶ್ರಮಿಸಿದ್ದರು.