ಜಿಲ್ಲೆ

ಮನೆ ಬಾಗಿಲು ಮುರಿದು ಚಿನ್ನಾಭರಣ ಕದ್ದಿದ್ದ ಆರೋಪಿಯ ಬಂಧನ

Webdesk - Ravikanth

ಕೊಳ್ಳೇಗಾಲ: ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ 30 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿಯನ್ನು ಬಂಧಿಸಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಡಿವೈಎಸ್ಪಿ ಕಚೇರಿ ಮುಂಭಾಗ ಶನಿವಾರ ಸುದ್ದಿಗೋಷ್ಠಿ ನಡೆಸಿದ ಕೆ.ಎಸ್. ಸುಂದರ್ ರಾಜ್‌ ಈ ವಿಷಯ ತಿಳಿಸಿದರು. ಮೇ.29ರಂದು ಯಳಂದೂರು ಠಾಣಾ ವ್ಯಾಪ್ತಿಯ ಕೆಸ್ತೂರು ಗ್ರಾಮದ ಶಾಂತಮ್ಮ ಎಂಬುವರ ಮನೆಯಲ್ಲಿ ಅದೇ ಗ್ರಾಮದ ರಾಚಪ್ಪಾಜಿ(36) ಎಂಬಾತ ಕಳ್ಳತನ ಮಾಡಿ 30 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ಬಂದ ಹಿನ್ನಲೆಯಲ್ಲಿ ಪ್ರಕರಣದ ಬೆನ್ನತ್ತಿ ಆರೋಪಿಯನ್ನು ಜು.2 ರಂದು ಬಂಧಿಸಿದ್ದೇವೆ ಎಂದರು.

ಕಾರ್ಯಾಚರಣೆಯಲ್ಲಿ ಸಿಪಿಐ ಶಿವಮಾದಯ್ಯ, ಪಿಎಸ್ಐ ಕರಿಬಸಪ್ಪ, ಸಿಬ್ಬಂದಿಗಳಾದ ಟಿ.ಕೆ ವೆಂಕಟೇಶ್, ವಾಸುದೇವ, ಹಂಪಾಸಾಗರ್, ಮಹೇಶ್ ಮತ್ತಿತರರು ಇದ್ದರು.