More

    ರಾಷ್ಟ್ರಪತಿ ಅಭ್ಯರ್ಥಿ ಸಿನ್ಹಾಗೆ ಸೋಲು ಬಯಸಿದ್ರಾ ತೆಲಂಗಾಣ ಸಿಎಂ?; ಸದ್ದು ಮಾಡ್ತಿದೆ ಕೆಸಿಆರ್ ವಾಪಸ್ ಪಡೆದ ‘ಶಬ್ದ’

    ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್​ (ಕೆಸಿಆರ್) ಅವರು ಕೇಂದ್ರದ ಪ್ರತಿಪಕ್ಷಗಳ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಸೋಲು ಬಯಸಿದ್ರಾ?
    – ಹೀಗೊಂದು ಚರ್ಚೆಗೆ ಒಳಪಡುವಂಥ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಸಿಎಂ ಕೆಸಿಆರ್ ಆಡಿರುವ ಮಾತೇ ಅವರು ಇಂಥದ್ದೊಂದು ವಿವಾದಕ್ಕೆ ಈಡಾಗುವಂತೆ ಮಾಡಿದ ವಿಪರ್ಯಾಸವೂ ಇದಾಗಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೆಸಿಆರ್, ವೇದಿಕೆ ಮೇಲಿದ್ದ ಯಶವಂತ್ ಸಿನ್ಹಾ ಅವರನ್ನು ಉದ್ದೇಶಿಸಿ ಶುಭಾಶಯವನ್ನೂ ಕೋರಿದ್ದರು.

    ‘ಮಾನ್ಯ ಯಶವಂತ್ ಸಿನ್ಹಾ ಅವರಿಗೆ ಹೃದಯಪೂರ್ವಕ ಸ್ವಾಗತ ಕೋರುತ್ತ ಅವರ ವಿಜಯಕ್ಕೆ ಮನೋಭಿಲಾಷೆ ವ್ಯಕ್ತಪಡಿಸುತ್ತ ನಾನು ನನ್ನ ಶಬ್ದ ವಾಪಸ್ ಪಡೆಯುತ್ತಿದ್ದೇನೆ, ಧನ್ಯವಾದ’ ಎಂದು ಅವರು ಹೇಳಿದ್ದರು.

    ಇದನ್ನೂ ಓದಿ: ಕೋಣೆಯಲ್ಲಿ ನೇತಾಡುತ್ತಿತ್ತು ಯಜಮಾನನ ಶವ; ನೆಲದ ಮೇಲಿತ್ತು ಮಕ್ಕಳು-ಪತ್ನಿ ಸೇರಿ ನಾಲ್ವರ ಮೃತದೇಹ!

    ಇಷ್ಟೇ ಮಾತಿರುವ ಈ ಚಿಕ್ಕ ವಿಡಿಯೋ ತುಣುಕೊಂದನ್ನು ರಾಜಕೀಯ ಲಾಭಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಲಾರಂಭಿಸಿದೆ. ಆದರೆ ಕೆಸಿಆರ್ ಅವರ ಮಾತಿನ ಭರದಲ್ಲಿ ಹೀಗೊಂದು ಎಡವಟ್ಟಾಗಿದೆ ಎನ್ನಲಾಗುತ್ತಿದೆ. ಸಿನ್ಹಾಗೆ ಶುಭವನ್ನು ಕೋರಿ ಜಯವನ್ನು ಹಾರೈಸಿದ ಮಾತು ಅವರದ್ದಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

    ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹೋದವನ ದುರಂತ ಸಾವು: ‘ಆಘಾತಕಾರಿ’ ಘಟನೆ..

    ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts