More

    ಗ್ರಾಮ ಆಡಳಿತಾಧಿಕಾರಿ(ವಿಎಒ) ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಪರೀಕ್ಷೆಗಳಿಗೆ ಉಚಿತ ತರಬೇತಿ

    ಮೈಸೂರು: ಜ್ಞಾನಬುತ್ತಿ ಸಂಸ್ಥೆಯ ವತಿಯಿಂದ ಮೇ.20 ರಂದು ಸಂಜೆ 06 ಗಂಟೆಗೆ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿ 45 ದಿನಗಳ ಗ್ರಾಮ ಆಡಳಿತಾಧಿಕಾರಿ(ವಿಎಒ) ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಪರೀಕ್ಷೆಗಳ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ.

    ಕಾರ್ಯಕ್ರಮವನ್ನು ಹುಣಸೂರು ಉಪ ವಿಭಾಗಾಧಿಕಾರಿಯಾದ ಐಎಎಸ್ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್ ಉದ್ಘಾಟಿಸಲಿದ್ದು, ವಾಗ್ಮಿ ಪ್ರೊ. ಎಂ. ಕೃಷ್ಣೆಗೌಡ ಅವರು ಅಧ್ಯಕ್ಷತೆ ವಹಿಸುವರು. ಭಾರತೀಯ ಆಡಳಿತ ಸೇವೆಯ ತರಬೇತಿ ನಿರತ ಐಎಎಸ್ ಅಧಿಕಾರಿ ಪಿ. ಶ್ರವಣ್ ಕುಮಾರ್ ಅವರು ಪರೀಕ್ಷಾ ಸಿದ್ಧತೆ ಕುರಿತು ಮಾತನಾಡುವರು.

     ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಕೆ.ಎಂ ಪ್ರಸನ್ನಕುಮಾರ್ , ಡಾ. ಹೊನ್ನಯ್ಯ, ಶ್ರೀಮತಿ ವಿಭಾವಸು, ಡಾ. ನಾಗಚಾರ್, ಡಾ. ಉಮೇಶ್ ಬೇವಿನಹಳ್ಳಿ, ಡಿ.ಎ. ಹೇಮಚಂದ್ರ, ಡಾ. ಪಿ.ಎನ್. ಹೇಮಚಂದ್ರ, ಮೋಹನ್ ಸಿ. ಡಾ. ಈ . ಶಿವಪ್ರಸಾದ್, ಎಸ್. ಗಣೇಶ, ಡಾ. ಪಳನಿಸ್ವಾಮಿ ಮೂಡಗೂರು, ಡಾ. ಹೆಚ್. ಎಂ ಸುದರ್ಶನ್, ಪ್ರೊ. ವಿ. ಜಯಪ್ರಕಾಶ್.ಆರ್. ರೋಹನ್ ರವಿಕುಮಾರ್, ಯು.ಎಂ. ಶರದ್‌ರಾವ್, ನಾಗರಾಜು ಬೀಜಗನಹಳ್ಳಿ, ರಾಜೀವ್ ಶರ್ಮ, ಡಾ. ವಸಂತಕುಮಾರ್ ಐಪನಹಳ್ಳಿ ಅವರು ವಿಶೇಷ ಆತಿಥಿಗಳಾಗಿ ಭಾಗವಹಿಸುವರು ಎಂದು ಕಾರ್ಯದರ್ಶಿ ಹೆಚ್. ಬಾಲಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts