ಜಿಲ್ಲೆ

ಮನೆಯಲ್ಲಿ ಚಿನ್ನಾಭರಣ ಕಳವು : ಹಾಡಹಗಲೇ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು

ಕಡಬ: ತಾಲೂಕಿನ ಆಲಂಕಾರು ಕಲ್ಲೇರಿ ನಿವಾಸಿ ಸುಧಾಕರ ಪೂಜಾರಿ ಎಂಬುವರ ಮನೆಯಿಂದ ಬುಧವಾರ ಹಾಡಹಗಲೇ ಬಾಗಿಲು ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈಯಲಾಗಿದೆ.

ಸುಧಾಕರ ಪೂಜಾರಿ ಪೇಟೆಗೆ ತೆರಳಿದ್ದರು. ಅವರ ಪತ್ನಿ ಸೌಮ್ಯಲತಾ 11 ಗಂಟೆ ಸುವಾರಿಗೆ ತೋಟಕ್ಕೆ ತೆರಳಿದ್ದರು. ಮಧ್ಯಾಹ್ನ ಮನೆಗೆ ಹಿಂತಿರುಗಿ ಬಂದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಮನೆ ಆಲಂಕಾರು ಶಾಂತಿಮೊಗರು ರಸ್ತೆಯ ಅಂಚಿನಲ್ಲಿದ್ದು, ಹಿಂಬದಿ ಬಾಗಿಲನ್ನು ಮುರಿದು ಕೃತ್ಯ ಎಸಗಲಾಗಿದೆ. ಸುವಾರು 4 ಲಕ್ಷ ರೂ. ಮೊತ್ತದ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳರು ದೋಚಿದ್ದು, ಟನಾ ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಾಗಿಲಿಗೆ ತುಳಿದ ಹೆಜ್ಜೆಯ ಗುರುತಿದ್ದು, ಶ್ವಾನದಳ ಕರೆಸಿ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.