ಕಾಸರಗೋಡು: ಪೆಟ್ರೋಲ್ ಖಾಲಿಯಾಗಿ ರಸ್ತೆ ಬದಿ ಸ್ಕೂಟರ್‌ನೊಂದಿಗೆ ನಿಂತಿದ್ದ ಯುವಕನನ್ನು ನಾಲ್ಕು ಮಂದಿಯ ತಂಡ ಅಪಹರಿಸಿ 33 ಸಾವಿರ ರೂ. ದೋಚಿದ್ದಾರೆ. ಮಧೂರು ಚೆನಕ್ಕೋಡ್ ನಿವಾಸಿ ಶೈಲೇಶಿ(28) ಹಣ ಕಳೆದುಕೊಂಡವರು. ಶೈಲೇಶ್ ನೀಡಿದ ದೂರಿನ ಮೇರೆಗೆ ಕಾಸರಗೋಡು ನಗರಠಾಣೆ ಪೊಲೀಸರು ನಾಲ್ವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಭಾನುವಾರ ತಡರಾತ್ರಿ ಪೆಟ್ರೋಲ್ ಖಾಲಿಯಾದಾಗ ಚೂರಿ-ಬಟ್ಟಂಪಾರೆ ರಸ್ತೆಯಲ್ಲಿ ನಿಂತಿದ್ದಾಗ, ಕಾರಿನಲ್ಲಿ ಆಗಮಿಸಿದ ನಾಲ್ಕು ಮಂದಿ ತಡರಾತ್ರಿ ಈ ಪ್ರದೇಶಕ್ಕೆ ಯಾಕೆ ಬಂದಿರುವೆ? ಎಂದು ಪ್ರಶ್ನಿಸಿ ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಪಟ್ಲ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಬೆದರಿಸಿ 3 ಸಾವಿರ ರೂ. ನಗದು ಕಸಿದು ತೆಗೆದು, ನಂತರ 30 ಸಾವಿರ ರೂ. ಗೂಗಲ್ ಪೇ ಮೂಲಕ ತೆಗೆದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.