ಜಿಲ್ಲೆ

ಮನೆಗೆ ನುಗ್ಗಿ ನಗ ನಗದು ಕಳವು

ಸೌಮ್ಯ ಆರ್

ಉಪ್ಪಿನಂಗಡಿ: ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ತಂಗಚ್ಚನ್ ಎಂಬುವವರ ಮನೆಗೆ ನುಗ್ಗಿ 2.46 ಲಕ್ಷ ರೂ ಮೌಲ್ಯದ ನಗ ನಗದನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ಮನೆ ಮಂದಿ ಸಮೀಪದ ಚರ್ಚ್‌ಗೆ ಕ್ರಿಸ್‌ಮಸ್ ವಿಶೇಷ ಪ್ರಾರ್ಥನೆಗೆ ತೆರಳಿದ್ದ ಸಂದರ್ಭ ಮನೆಯ ಮುಂಭಾಗದ ಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ 78 ಸಾವಿರ ರೂಪಾಯಿ, 10 ಗ್ರಾಂ ತೂಕದ ಚಿನ್ನದ ನಾಣ್ಯ, ಉಂಗುರ, ಬೆಂಡೋಲೆ, ಚೈನ್, ಪದಕಗಳ ಸಹಿತ ಒಟ್ಟು 42 ಗ್ರಾಂ ತೂಕದ ವಿವಿಧ ಚಿನ್ನದ ಆಭರಣಗಳನ್ನು ಕದ್ದೊಯ್ದಿದ್ದಾರೆ.ನಗದು ಸಹಿತ ಕಳವಾದ ವಸ್ತುವಿನ ಒಟ್ಟು ಮೌಲ್ಯ 2.46 ಲಕ್ಷ ರೂ.ಗಳೆಂದು ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.