ಸುಳ್ಯ: ಸಂಪಾಜೆ ಗ್ರಾಮದ ಚೌಕಿಯಲ್ಲಿ ರಾತ್ರಿ ವೇಳೆ ಗೂಡಂಗಡಿಗೆ ನುಗ್ಗಿದ ಕಳ್ಳರು ನಗದು ಸಹಿತ ಅಂಗಡಿ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಚೌಕಿಯ ಚಿದಾನಂದ ಮತ್ತು ಪಾರ್ವತಿ ಎಂಬುವರ ಗೂಡಂಗಡಿಗೆ ರಾತ್ರಿ ವೇಳೆ ಕಳ್ಳರು ನುಗ್ಗಿದ್ದು, ಅಂಗಡಿಯಲ್ಲಿ ಬೆಳಕು ಕಾಣುತ್ತಿರುವ ಕಾರಣದಿಂದ ಅಂಗಡಿ ಪಕ್ಕದ ಮನೆಯವರು ಕೂಡಲೇ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.
ಈ ವೇಳೆ ಅಲ್ಲಿಯ ಸ್ಥಳೀಯರು ಸೇರಿ ಕಳ್ಳರನ್ನು ಹಿಡಿಯಲು ಹೋದರೂ, ತಪ್ಪಿಸಿಕೊಂಡು ಪರಾರಿಯಾದರೆಂದು ತಿಳಿದುಬಂದಿದೆ. ಗೂಡಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯಲ್ಲಿ ಮಾರಾಟಕ್ಕಿರಿಸಿದ್ದ ಜ್ಯೂಸ್ ಬಾಟಲಿಗಳು, ಬೇಕರಿ ತಿಂಡಿ ತಿನಿಸುಗಳು, ಸಿಗರೇಟ್ ಪ್ಯಾಕೆಟ್ ಹಾಗೂ ಒಂದು ಸಾವಿರ ರೂ. ನಗದನ್ನು ಕಳವುಗೈದಿದ್ದಾರೆ.