ಕಾಸರಗೋಡು: ನಿವೃತ್ತ ಬ್ಯಾಂಕ್ ಅಧಿಕಾರಿ ಮಾತಮಂಗಲಂ ನಿವಾಸಿಯೊಬ್ಬರ ಮನೆಯಿಂದ 23 ಪವನ್ ಚಿನ್ನ, 2 ಲಕ್ಷ ರೂ. ಮೌಲ್ಯದ ವಜ್ರದ ಉಂಗುರ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿಗಳಿಬ್ಬರನ್ನು ಪಯ್ಯನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೆಲ್ಲಿಕಟ್ಟೆ ಚರ್ಲಡ್ಕ ನಿವಾಸಿ ಕಾಜಾ ಹುಸೈನ್ ಮತ್ತು ಆಲಂಪಾಡಿ ನಿವಾಸಿ ಅಬ್ದುಲ್ ಲತೀಫ್ ಬಂಧಿತರು. ಜೂನ್ 19ರಂದು ಕಳವು ನಡೆದಿದ್ದು, ಮನೆಮಂದಿ ಆಸ್ಪತ್ರೆಗೆ ತೆರಳಿದ್ದ ಸಂದರ್ಭ ಮನೆ ಬಾಗಿಲು ಒಡೆದು ನುಗ್ಗಿ ಕಳವು ನಡೆಸಲಾಗಿತ್ತು. ಕಾಸರಗೋಡು ನೋಂದಾವಣೆ ಸ್ಕೂಟರ್‌ನಲ್ಲಿ ಬಂದು ಕಳವು ನಡೆಸಿರುವ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಾವಳಿ ಪತ್ತೆಯಾದ ಹಿನ್ನೆಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.