ಅಳವಂಡಿಯಲ್ಲಿ ಹಮ್ಮಿಕೊಂಡಿದ್ದ ಶ್ರೀಮಾತಾ ಶಾಂತಮ್ಮದೇವಿ ಬಯಲಾಟ ಸಂಘದ ಕುರುಕ್ಷೇತ್ರ ನಾಟಕ ಕಾರ್ಯಕ್ರಮಕ್ಕೆ ಶ್ರೀ ಮರುಳಾರಾದ್ಯ ಶಿವಾಚಾರ್ಯರು ಚಾಲನೆ ನೀಡಿದರು. ಪ್ರಮುಖರಾದ ಗುರುಬಸವರಾಜ, ಅನ್ವರ, ಹನುಮಂತಪ್ಪ, ನಾಗಪ್ಪ, ಡಾ.ಸಿದ್ದಲಿಂಗಸ್ವಾಮಿ, ಚೌಡಪ್ಪ ಇತರರಿದ್ದರು. 
ಜಿಲ್ಲೆ

ಒತ್ತಡದ ಜೀವನಕ್ಕೆ ರಂಗಭೂಮಿ ಸಹಕಾರಿ

ಅಳವಂಡಿ: ಒತ್ತಡದ ಜೀವನದಲ್ಲಿ ಮನಶಾಂತಿಗೆ ಸಂಗೀತ, ನಾಟಕ, ಜನಪದ ಇತರ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಯುವಕರು ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು ಎಂದು ಶ್ರೀ ಸಿದ್ಧೇಶ್ವರ ಮಠದ ಶ್ರೀ ಮರುಳಾರಾದ್ಯ ಶಿವಾಚಾರ್ಯರು ಹೇಳಿದರು.

ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ಜಾತ್ರೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಶ್ರೀಮಾತಾ ಶಾಂತಮ್ಮದೇವಿ ಸೇವಾ ಬಯಲಾಟ ಸಂಘದ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಮನಸ್ಸು ಹಗುರಾಗುತ್ತದೆ. ರಂಗಭೂಮಿಯಲ್ಲಿ ಬರುವ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಗ್ರಾಪಂ ಸದಸ್ಯ ಗುರುಬಸವರಾಜ ಹಳ್ಳಿಕೇರಿ ಮಾತನಾಡಿ, ಸಾಮಾಜಿಕ ಜಾಲತಾಣದ ಪ್ರಭಾವದಿಂದ ಯುವಕರು ಕಲೆ ಸಂಸ್ಕೃತಿಯನ್ನು ಮರೆತು ಹೆಚ್ಚಾಗಿ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಾರೆ. ಮೊಬೈಲ್ ಬಳಕೆ ಕಡಿಮೆ ಮಾಡಿ ಎಲ್ಲರೊಂದಿಗೆ ಸಮಾಜದ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಸಾಧ್ಯ ಎಂದರು.

ಪ್ರಮುಖರಾದ ಅನ್ವರ ಗಡಾದ, ಹನುಮಂತಪ್ಪ ಎಲಿಗಾರ, ನಾಗಪ್ಪ ಸವಡಿ, ಅರವಿಂದಪ್ಪ, ಡಾ.ಸಿದ್ದಲಿಂಗಸ್ವಾಮಿ, ಚೌಡಪ್ಪ ಜಂತ್ಲಿ, ಮಂಜುನಾಥಗೌಡ, ದೇವಪ್ಪ, ಭೀಮರೆಡ್ಡಿ, ಪರಪ್ಪ, ಗವಿಸಿದ್ದಪ್ಪ, ಹನುಮರೆಡ್ಡಿ, ದೇವೇಂದ್ರಪ್ಪ, ಸುರೇಶ, ಶೇಖರಡ್ಡಿ, ತೋಟಯ್ಯ, ಮಲ್ಲಪ್ಪ, ರಾಮನಗೌಡ, ಶ್ರೀನಿವಾಸ, ವಿರೂಪಾಕ್ಷಪ್ಪ, ಮಹೇಶ, ನಾಗರಾಜ, ಚಿಕ್ಕಪ್ಪ, ಶಿವಕುಮಾರ, ವಿರೂಪಾಕ್ಷಯ್ಯ, ಕಲ್ಲಪ್ಪ, ಉಮೇಶರೆಡ್ಡಿ, ಹನುಮಂತಪ್ಪ, ನೀಲಪ್ಪ ಇತರರಿದ್ದರು.