ಅಳವಂಡಿ ಸಮೀಪದ ನೀರಲಗಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ನಾಟ್ಯ ಸಂಘದಿಂದ ಪ್ರದರ್ಶನಗೊಂಡ ನಾಟಕದಲ್ಲಿ ಕಲಾವಿದರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಬೀರಪ್ಪ ಡೊಳ್ಳಿನ, ಈಶಪ್ಪ ಆನಂದಳ್ಳಿ, ಪಾಲಪ್ಪ ಆನಂದಳ್ಳಿ, ಸಂಗಪ್ಪ ಯಲ್ಲಮ್ಮನವರ, ಬಸವರಾಜ ಇದ್ದರು. 
ಜಿಲ್ಲೆ

ರಂಗಭೂಮಿ ಕಲೆಗೆ ಪ್ರೋತ್ಸಾಹ ಅಗತ್ಯ

Kopala - Desk - Eraveni

ಅಳವಂಡಿ: ನಾಟಕ, ಬಯಲಾಟ ಮುಂತಾದ ರಂಗ ಕಲೆಗಳ ಪ್ರದರ್ಶನ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರಲ್ಲಿ ಬಾಂಧವ್ಯ ಗಟ್ಟಿಗೊಳಿಸಲು ಸಹಕಾರಿಯಾಗಿವೆ ಎಂದು ಮಾಜಿ ತಾಪಂ ಸದಸ್ಯ ಬಸವರಾಜ ಬಂಡಿ ಹೇಳಿದರು.

ಸಮೀಪದ ನೀರಲಗಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ನಾಟ್ಯ ಸಂಘದಿಂದ ಪ್ರದರ್ಶನಗೊಂಡ ‘ಮರೆತರೆ ನಿನ್ನ ಮರೆವೇನು ನನ್ನ’ ಅರ್ಥಾತ್-ಯಾರ ಹೂವು ಯಾರ ಮುಡಿಗೋ ಎಂಬ ಸಾಮಾಜಿಕ ನಾಟಕಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.

ಕಲೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಕಲೆ ಇನ್ನೂ ಹಳ್ಳಿಗಳಲ್ಲಿ ಜೀವಂತವಾಗಿವೆ. ಯುವ ಜನತೆ ರಂಗ ಕಲೆ ಬಗ್ಗೆ ಆಸಕ್ತಿ ವಹಿಸಿ ಉಳಿಸಿ ಬೆಳೆಸಬೇಕು. ನಾಟಕಗಳ ಪ್ರದರ್ಶನದಲ್ಲಿ ತಿಂಗಳುಗಟ್ಟಲೇ ಶ್ರಮ ಇದೆ. ಇಂತಹ ಕಲೆಗೆ ಜನರ ಪ್ರೋತ್ಸಾಹ ಸಿಕ್ಕರೆ ಎಲೆ ಮರೆ ಕಾಯಿಯಂತೆ ಇರುವ ಪ್ರತಿಭೆಗಳು ಹೊರ ಬರಲು ಸಾಧ್ಯವಾಗುತ್ತದೆ ಎಂದರು.

ಪ್ರಮುಖರಾದ ನಿಂಗಪ್ಪ, ಅಂದಾನಯ್ಯ, ಅಂದಪ್ಪ, ಕೊಟ್ರಪ್ಪ, ಮುತ್ತಪ್ಪ, ವೀರೇಶ ಹಾಲಗುಂದಿ, ಮಹಾದೇವಪ್ಪ, ಸಂತೋಷ, ವಸಂತ, ಪುನೀತ್, ಗವಿಸಿದ್ದಪ್ಪ, ಬಸವರಾಜ, ಮಹೇಶ ತಳವಾರ ಇದ್ದರು.