ಜಿಲ್ಲೆ

ಪದ್ಮರಾಜ್ ಕಾರ್ಯ ಅಭಿನಂದನೀಯ: ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿಪ್ರಾಯ

Avinash R

ಮೂಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಪಾಲಿಸಿ ಸರಳ ವ್ಯಕ್ತಿತ್ವದ ಮೂಲಕ ಸಮಾಜದ ಎಲ್ಲರಿಗೆ ಸಹಾಯ ಹಸ್ತ ನೀಡಿ ಸರ್ವರಿಗೂ ಸಮ ಬಾಳು ಎಂಬ ಸಿದ್ಧಾಂತದೊಂದಿಗೆ ಅಸಹಾಯಕರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರಲು ಪ್ರಯತ್ನಿಸಿ ಜನಮನ್ನಣೆಗಳಿಸಿರುವ ವಕೀಲ ಪದ್ಮರಾಜ್ ಆರ್.ಪೂಜಾರಿ ಕಾರ್ಯ ಅಭಿನಂದನೀಯ ಎಂದು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಅಂತಾರಾಷ್ಟ್ರೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಮೂಲ್ಕಿಯ ಆಶ್ರಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಪದ್ಮರಾಜ್ ಅವರನ್ನು ಗೌರವಿಸಿ ಮಾತನಾಡಿದರು.

ಆಶ್ರಮದ ನಿರ್ದೇಶಕಿ ರಜನಿ ಸಿ.ಭಟ್, ಜ್ಯೋತಿಷಿ ವಿಶ್ವನಾಥ್ ಭಟ್, ಉಷಾಶ್ರೀ, ರಾಹುಲ್ ಚಂದ್ರಶೇಖರ್, ರಾವ್ ಸೂರ್ಯ, ಸಂಚಾಲಕರಾದ ಪುನೀತ್ ಕಷ್ಣ ಉಪಸ್ಥಿತರಿದ್ದರು.