ಜಿಲ್ಲೆ

ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಶ್ಲಾಘನೀಯ

ಇಂದಿರಾ ಎನ್ ಕೆ

ಕೋಟ: ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡುತ್ತಿರುವ ಸ್ಪರ್ಶ ಸಾಧನೆ ಶ್ಲಾಘನೀಯ ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು.

ಬಾಳೆಬೆಟ್ಟು ಫ್ರೆಂಡ್ಸ್ ಹಾಗೂ ಕೋಟ ಭಗತ್‌ಸಿಂಗ್ ಯುವ ವೇದಿಕೆ ಆಶ್ರಯದಲ್ಲಿ ಮಣೂರಿನ ಡಾ.ಸತೀಶ್ ಪೂಜಾರಿ ವೇದಿಕೆಯಲ್ಲಿ ಸ್ಪರ್ಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಳೆಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಯಕ್ಷಗಾನ ಕಲಾವಿದ ಕೋಟ ಸುರೇಶ್ ಅವರಿಗೆ ಹುಟ್ಟೂರು ಸನ್ಮಾನ ನೀಡಿ ಗೌರವಿಸಿದರು. ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು. ಉಡುಪಿ ಪವರ್ ಮಹಿಳಾ ಸಂಘಟನೆ, ಕೋಡಿ ಪ್ರಗತಿ ಯುವಕ ಸಂಘಕ್ಕೆ ವಿಶೇಷ ಪುರಸ್ಕಾರ ನೀಡಲಾಯಿತು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಯಕ್ಷ ಕವಿ ಪವನ್ ಕಿರಣ್ ಕೆರೆ, ಮನೋ ವೈದ್ಯ ಡಾ.ಪ್ರಕಾಶ್ ತೋಳಾರ್, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಮಣೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಚ್.ಕುಂದರ್, ಪ್ರಥಮ ದರ್ಜೆ ಗುತ್ತಿಗೆದಾರ ಧೀರಜ್ ಹೆಜಮಾಡಿ, ಉದ್ಯಮಿ ಚೇತನ್ ಶೆಟ್ಟಿ, ಸಿಎ ರಾಘವೇಂದ್ರ ಶೆಟ್ಟಿ, ಪ್ರಮುಖರಾದ ಕುಶಲ್ ಶೆಟ್ಟಿ, ಉದ್ಯಮಿ ಉಮೇಶ್ ಪೂಜಾರಿ, ಸದಾನಂದ ಜಿ., ಪಾಂಡು ಪೂಜಾರಿ, ಮಿಥಿಲೇಶ್ ಕೋಟ, ಕಿರಣ್ ಪೂಜಾರಿ ಉಪಸ್ಥಿತರಿದ್ದರು.

ಭಗತ್‌ಸಿಂಗ್ ಯುವ ವೇದಿಕೆಯ ಪ್ರಸಾದ್ ಬಿಲ್ಲವ ಸ್ವಾಗತಿಸಿದರು. ಸ್ಪರ್ಶ ಕಾರ್ಯಕ್ರಮದ ಸಂಚಾಲಕ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.