ಜಿಲ್ಲೆ

ಪಾಲಿಕೆ ನಿರ್ಲಕ್ಷ್ಯ; ರಾತ್ರಿ ಸುರಿದ ಮಳೆಗೆ ಸಿಎಂ ಗೃಹ ಕಚೇರಿ ಕೃಷ್ಣಾ ಹಿಂದಿರುವ ಅಂಡರ್ ಪಾಸ್ ಜಲಾವೃತ

ಬೆಂಗಳೂರು: ನಿನ್ನೆ ರಾತ್ರಿ (ನ.08) ಸಿಲಿಕಾನ್ ಸಿಟಿಯಲ್ಲಿ ಧಾರಕಾರ ಮಳೆ ಸುರಿದ ಹಿನ್ನಲೆಯಲ್ಲಿ ಶಾಂಗ್ರಿಲ ಹೋಟೆಲ್ ಹಿಂದೆ ಇರುವ ಸಿಎಂ ಗೃಹ ಕಚೇರಿ ಕೃಷ್ಣಾ ಹತ್ತಿರ ಇರುವ ಅಂಡರ್ ಪಾಸ್ ಜಲಾವೃತಗೊಂಡಿದೆ.

ಮಳೆ ಬಂದು ಅಂಡರ್ ಪಾಸ್​​ನಡಿ ನೀರು ನಿಂತರೂ ಸಹ ನೀರು ತೆರವು ಮಾಡದೆ, ಬ್ಯಾರಿಕೆಡ್ ಹಾಕದೆ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಅಂಡರ್ ಪಾಸ್ ಮುಂದೆ ಬ್ಯಾರಿಕೆಡ್ ಇದ್ದರೂ ಸಹ ಹೆಸರಿಗೆ ಮಾತ್ರ ಇಡಲಾಗಿದೆ. ಆದರೆ ಈ ವಿಷಯ ತಿಳಿಯದ ವಾಹನ ಸವಾರರು ನೀರು ಇಲ್ಲವೆಂದು ತಿಳಿದುಕೊಂಡು ಹಾಗೆ ಅಂಡರ್ ಪಾಸ್​​​ಗೆ ಬರುತ್ತಿದ್ದು, ಅಂಡರ್ ಪಾಸ್ ಒಳಗೆ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.

ಇಲ್ಲಿ ಯಾವುದೆ ಸೌಕರ್ಯಗಳು, ನಿರ್ವಹಣೆ ಸಹ ಇಲ್ಲ, ಕರೆಂಟ್ ಆಗ್ಲಿ ಸಿಸಿ ಕ್ಯಾಮೆರ ಆಗ್ಲಿ ಯಾವುದು ಇಲ್ಲಿ ವರ್ಕ್ ಆಗಲ್ಲ. ಸಿಎಂ ನಿವಾಸದ ಹಿಂದೆ ಇರುವ ಅಂಡರ್ ಪಾಸ್ ವ್ಯವಸ್ಥೆ ಹೋಗಿರುವಾಗ ನಗರದಲ್ಲಿ ಇರುವ ಉಳಿದ ಅಂಡರ್ ಪಾಸ್ ಗತಿ ಏನು?. 

ಇಂದು ಸಹ ಮಳೆ 
ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಮಧ್ಯಾಹ್ನ ಭರ್ಜರಿ ಮಳೆ ಸುರಿದಿದೆ. ಇಂದು ಸಹ ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದು ಎಚ್ಚರಿಕೆ ನೀಡಿದೆ. ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಇಂದು ಸಹ ಮಳೆ ಅವಾಂತರ ಸೃಷ್ಟಿಸುವುದು ಪಕ್ಕಾ. ಈ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ಮನೆಗಳ ಜನ ಎಚ್ಚರದಿಂದ ಇರಲು ಸೂಚನೆ ನೀಡಲಾಗಿದೆ.