ಜಿಲ್ಲೆ

ಜಮದಗ್ನಿ ಮಹಾಲಿಂಗೇಶ್ವರ ದೇವರ ಶಿಲಾಮಯ ಮಂದಿರ ಲೋಕಾರ್ಪಣೆ

ಜನ್ನಾಡಿ: ಹಾಲಾಡಿ ಗ್ರಾಮದ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವರ ಶಿಲಾಮಯ ಮಂದಿರ ಲೋಕಾರ್ಪಣೆ ಮತ್ತು ಪುನಃ ಪ್ರತಿಷ್ಠಾಪನೆ ಬ್ರಹ್ಮಕಲಶ ವಾಸುದೇವ ಜೋಯಿಸರ ನೇತೃತ್ವದಲ್ಲಿ ಸಂಪನ್ನಗೊಂಡಿತು.

ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ವಾಸುದೇವ ಜೋಯಿಸರು ಉದ್ಘಾಟಿಸಿದರು. ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದವರು ಮತ್ತು ದಾನಿಗಳನ್ನು ಗೌರವಿಸಲಾಯಿತು. ಅರ್ಚಕ ಭಾಸ್ಕರ ಅಡಿಗ, ಹಾಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಅಶೋಕ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಅನುರಾಧಾ ಪಿ.ಶೆಟ್ಟಿ, ಹಾಲಾಡಿ ಮಾರಿಕಾನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಲಾಡಿ ಸರ್ವೋತ್ತಮ ಹೆಗ್ಡೆ, ಉದ್ಯಮಿಗಳಾದ ಚಿಟ್ಟೆಬೈಲು ಜಗನ್ನಾಥ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಗೈನಾಡಿ, ಮಂಜುನಾಥ ರಾವ್, ಜನಾರ್ದನ ಹಾಲಾಡಿ, ಗುರುಪ್ರಸಾದ ಶೆಟ್ಟಿ, ರಾಜಗೋಪಾಲ ಅಡಿಗ, ಧರ್ಮಸ್ಥಳ ಸ್ವಸಹಾಯ ಸಂಘದ ಯೋಜನಾಧಿಕಾರಿ ನಾರಾಯಣ ಪಾಲನ್ ಉಪಸ್ಥಿತರಿದ್ದರು.

ಸೂರ್ಯಪ್ರಕಾಶ ದಾಮ್ಲೆ ಸ್ವಾಗತಿಸಿದರು. ವಿವೇಕ ಮಿತ್ಯಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರದೀಪ್ ಹಾಲಾಡಿ ಮತ್ತು ಸಂತೋಷ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜ್ಞಾನೇಶ ಶೆಟ್ಟಿ ವಂದಿಸಿದರು. ಆಶಾ ಕುಲಾಲ್ ಹಾಲಾಡಿ ಸಹಕರಿಸಿದರು.